ಸುರತ್ಕಲ್: ಜೆಸಿಬಿ ನುಗ್ಗಿಸಿ ಎಟಿಎಂ ದರೋಡೆಗೆ ಯತ್ನ


ಸುರತ್ಕಲ್: ಜೆಸಿಬಿ ಬಳಸಿ ಎಟಿಎಂ ದರೋಡೆಗೆ ವಿಫಲ ಯತ್ನ ಮಾಡಿರುವ ಸುರತ್ಕಲ್ ಇಡ್ಯಾ ಎಂಬಲ್ಲಿ‌ ನಡೆದಿದೆ.

ನಿನ್ನೆ ತಡರಾತ್ರಿ ಇಡ್ಯಾ ವಿದ್ಯಾದಾಯಿನಿ ಶಾಲೆ ಬಳಿಯ ದಿ ಸೌತ್ ಇಂಡಿಯನ್ ಬ್ಯಾಂಕ್ ನ ಎಟಿಎಂ ಹೊತ್ತೊಯ್ಯಲು ಖದೀಮರು ಯತ್ನಿಸಿದ್ದಾರೆ. ಕದ್ದ ಜೆಸಿಬಿಯನ್ನು ಬಳಸಿ ಎಟಿಎಂ ಹೊತ್ತೊಯ್ಯಲು ಯತ್ನಿಸಲಾಗಿದೆ. ಪಡುಬಿದ್ರೆಯಲ್ಲಿ ಕಳವು ಮಾಡಿದ್ದ ಜೆಸಿಬಿಯನ್ನು ಬಳಸಿ ಎಟಿಎಂಗೆ ನುಗ್ಗಿಸಲಾಗಿದೆ.


ಎಟಿಎಂ ಹೊತ್ತೊಯ್ಯುವ ಸಂದರ್ಭ ಬ್ಯಾಂಕ್ ನ ಸೆಂಟ್ರಲ್‌ ಸರ್ವಲೆನ್ಸ್ ಸಿಸ್ಟಂಗೆ ಮಾಹಿತಿ ಬಂದಿದೆ. ತಕ್ಷಣ  ಸರ್ವಲೆನ್ಸ್ ಸಿಸ್ಟಂ ಸಿಬ್ಬಂದಿ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ್ದ ಪೊಲೀಸರನ್ನು ಕಂಡು ಖದೀಮರು ಜೆಸಿಬಿ ಬಿಟ್ಟು ಪರಾರಿಯಾಗಿದ್ದಾರೆ.

ಮೊದಲು ಈ ಖದೀಮರು ಎಟಿಎಂ ಒಡೆಯಲು ಯತ್ನಿಸಿದ್ದಾರೆ. ಈ ಎಟಿಎಂ ಮಿಷಿನ್ ಒಳಗಡೆ 3.5 ಲಕ್ಷ ರೂ. ಹಣವಿತ್ತು. ಘಟನೆ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಎಟಿಎಂನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu