ವಿವಾಹ ನಿಶ್ಚಯವಾಗಿದ್ದ 21 ವರ್ಷದ ಯುವತಿ ಆತ್ಮಹತ್ಯೆ- ಸ್ನೇಹಿತೆಗೆ ವಾಟ್ಸಪ್ ನಲ್ಲಿ ಮೆಸೆಜ್ ಮಾಡಿದ ಬಳಿಕ ಕೃತ್ಯ


 ಕಾಸರಗೋಡು: ಸ್ನೇಹಿತೆಗೆ ವಾಟ್ಸಾಪ್ ಸಂದೇಶ ರವಾನಿಸಿದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ‌ನಡೆದಿದೆ.
 
 ಕಾಸರಗೋಡು ಜಿಲ್ಲೆಯ ಮೈಲಟ್ಟಿ ದೇವನಪೊಡಿಚಾಪರ ಏಕಲ್ ನ ನೀತುಕೃಷ್ಣ (21) ಮೃತರು.  ನೀತುಕೃಷ್ಣ ಅವರ ಮದುವೆ ನಿಶ್ಚಯವಾಗಿತ್ತು.
 
ಕೂಪಪುನ್ನ ಸ್ವಸ್ತಿ ಕ್ಲಬ್ ಶಿಂಗಾರಿಮೇಳ ಕಲಾವಿದೆಯಾಗಿದ್ದ ಇವರು ಡಿವೈಎಫ್‌ಐ ಕೂಪಪುನ್ನ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿದ್ದಾರೆ.  ಟೈಲರ್ ಆಗಿರುವ ತಂದೆ ಕೆ.  ಕೃಷ್ಣನ್ ಕೆಲಸದ ನಿಮಿತ್ತ ಕಾಸರಗೋಡ್ ಗೆ ಹಾಗೂ ತಾಯಿ ಕೆ.ಟಿ.ಶ್ರೀಲತಾ ಕಾಞಂಗಾಡ್ ಗೆ ತೆರಳಿದ್ದರು.  ಈ ವೇಳೆ ನೀತುಕೃಷ್ಣ  ನೇಣು ಬಿಗಿದುಕೊಂಡಿದ್ದಾಳೆ.  

ಆತ್ಮಹತ್ಯೆ ಸಂದೇಶವನ್ನು  ಸ್ನೇಹಿತೆಗೆ ಕಳುಹಿಸಿ ಈಕೆ‌ ನೇಣು ಬಿಗಿದುಕೊಂಡಿದ್ದಾಳೆ.  ಸಂದೇಶವನ್ನು ಸ್ವೀಕರಿಸಿದ ಗೆಳತಿ ಅನುಮಾನಗೊಂಡು ತನ್ನ ಸಂಬಂಧಿಕರಿಗೆ ಮಾಹಿತಿ ತಿಳಿಸಿದಳು.  ಆದರೆ ಅಲ್ಲಿಗೆ ತಲುಪಿದಾಗ ನೀತು ಶವವಾಗಿ ಪತ್ತೆಯಾಗಿದ್ದಳು.  

ನೀತುಕೃಷ್ಣ ಪೆರಿಯ ಎಸ್.ಎನ್.ಕಾಲೇಜಿನಲ್ಲಿ ಪದವಿ ಮುಗಿಸಿ ಬಿ.ಎಡ್ ಸೇರಲು ತಯಾರಿ ನಡೆಸುತ್ತಿದ್ದರು.  ಬೇಕಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.