ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

10 ತಿಂಗಳ ಹಸುಗೂಸಿನ ತಲೆ ಮೇಲೆ ಬಿತ್ತು ಅಂಗನವಾಡಿ ಮೇಲ್ಛಾವಣಿ

ಯಾದಗಿರಿ: ಲಸಿಕೆ ಹಾಕಲೆಂದು ಬಂದ ಹತ್ತು ತಿಂಗಳ‌ ಹಸುಗೂಸಿನ ತಲೆಯ ಮೇಲೆಯೇ ಅಂಗನವಾಡಿ ಕಟ್ಟಡದ ಛಾವಣಿಯೇ ಕುಸಿದ ದುರದೃಷ್ಟಕರ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಗ್ರಾಮದಲ್ಲಿ ನಡೆದಿದೆ.

ಪರಿಣಾಮ 10 ತಿಂಗಳ ಮಗು ಕೀರ್ತಿ ತಲೆಗೆ ಪೆಟ್ಟಾಗಿದೆ. ಮಗುವಿ ಗೆ ಅಂಗನವಾಡಿಯಲ್ಲಿ ಇಂದ್ರಧನುಷ್ ಲಸಿಕೆ ಹಾಕುತ್ತಿದ್ದಾಗಲೇ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಸಂದರ್ಭ ಅಲ್ಲೇ ಕೆಳಗಿದ್ದ ಮಗುವಿನ ತಲೆ ಮೇಲೇ ಬಿದ್ದಿದೆ. ಪರಿಣಾಮ 10 ತಿಂಗಳ ಮಗು ಕೀರ್ತಿ ತಲೆಗೆ ಗಾಯ ಉಂಟಾಗಿದೆ. ಆದರೆ ಗಾಯವಾದ ಸ್ಥಳಕ್ಕೆ ಮದ್ದನ್ನು ಹಚ್ಚಿ ಬ್ಯಾಂಡೇಜ್‍ ಹಾಕಿದ ಮೇಲೆ ಮಗು ನಗುತ್ತಿರುವುದು ನೋಡುಗರ ಹೃದಯಸ್ಪರ್ಶಿಸುತ್ತಿದೆ. 

ಈ ಸಂದರ್ಭ ಅಂಗನವಾಡಿಯಲ್ಲೇ ಇದ್ದ ಇತರ 6 ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಮಗು ಕೀರ್ತಿಯನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಕಳಪೆ ಕಟ್ಟಡ ನಿರ್ಮಾಣವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.