IPHONE ಗಾಗಿ 8 ತಿಂಗಳ ಮಗುವನ್ನು ಮಾರಿದ ದಂಪತಿ!

ಕೋಲ್ಕೊತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ IPHONE ಖರೀದಿ ಹಾಗೂ ಭೋಗದ ಜೀವನಕ್ಕಾಗಿ ತಮ್ಮ 8 ತಿಂಗಳ ಮಗುವನ್ನೇ ಮಾರಾಟ ಮಾಡಿದ ಆರೋಪದ ಮೇಲೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ಜಯದೇವ್ ಘೋಷ್ ಮತ್ತು ಪತ್ನಿ ತಮ್ಮ ಮಗುವನ್ನು ರೂ. 2 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ದಂಪತಿ ಬಳಿ ಸುಮಾರು 1 ಲಕ್ಷ ರೂ. ಮೌಲ್ಯದ ಹೊಚ್ಚಹೊಸ IPHONE -14 ಇರುವುದನ್ನು ಕಂಡು ಹಾಗೂ ಮಗು ಕಾಣೆಯಾಗಿರುವುದನ್ನು ಗಮನಿಸಿದ ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಲ್ಲದೆ, ಮಗು ಮಾರಾಟ ಮಾಡಿದ ಹಣದಲ್ಲಿ ದಂಪತಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. IPHONE-14 ಖರೀದಿಸಿ, ಹಾಗೂ ಯೂಟ್ಯೂಬ್ ಸ್ಟೋರೀಸ್ ಚಿತ್ರೀಕರಿಸುವ ಉದ್ದೇಶವನ್ನು ದಂಪತಿ ಹೊಂದಿದ್ದರೆಂದು  ವಿಚಾರಣೆಯಿಂದ ಬಯಲಾಗಿದೆ. 

ಕಳೆದ ತಿಂಗಳು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಹಿತಿಯನ್ನು ಆಧರಿಸಿ ಪೊಲೀಸರು  ಮಗುವನ್ನು ರಕ್ಷಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu