ಸಮಸ್ಯೆಯೇ..? ಕುಳಿತಲ್ಲಿಂದಲೇ ಟ್ವೀಟ್ ಮೂಲಕ ದೂರು ನೀಡಿ..!- ಸಿಎಂ ಸಿದ್ದರಾಮಯ್ಯ ಹೊಸ ವ್ಯವಸ್ಥೆ

ಸಮಸ್ಯೆಯೇ..? ಕುಳಿತಲ್ಲಿಂದಲೇ ಟ್ವೀಟ್ ಮೂಲಕ ದೂರು ನೀಡಿ..!- ಸಿಎಂ ಸಿದ್ದರಾಮಯ್ಯ ಹೊಸ ವ್ಯವಸ್ಥೆ





ನಿಮಗೆ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ದೂರು ನೀಡಬೇಕೆ..? ಹಾಗಿದ್ದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ವ್ಯವಸ್ಥೆ ಕಲ್ಪಿಸಿದ್ದಾರೆ. ಕುಳಿತಲ್ಲಿಂದಲೇ ನೀವು ದೂರು ನೀಡಬಹುದು. ಅದನ್ನು ಸೂಕ್ತ ಇಲಾಖೆಗೆ ಕಳಿಸಿ ಆ ದೂರಿನ ವಿಚಾರಣೆ ನಡೆಸಲಾಗುವುದು.



ಹೌದು, ಇದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಹೊಸ ವ್ಯವಸ್ಥೆ. ಹಾಗಿದ್ದರೆ, ಆ ಹೊಸ ವ್ಯವಸ್ಥೆ ಏನು ಗೊತ್ತೇ..?


ಈ ದೂರು ಸ್ವೀಕರಿಸಲಿಕ್ಕಾಗಿ ಸಿಎಂ ಹೊಸ ಟ್ವಿಟ್ಟರ್ ಹ್ಯಾಂಡಲ್ ಆರಂಭಿಸಿದ್ದಾರೆ. 

@osd_cmkarnataka ಎಂಬ ಟ್ವಿಟ್ಟರ್ ಹ್ಯಾಂಡಲ್ ಆರಂಭಿಸಿದ್ದು, ಜನರು ತಮ್ಮ ನೋವು-ದೂರು ದುಮ್ಮಾನಗಳನ್ನು ಈ ಟ್ವಿಟ್ಟರ್ ಹ್ಯಾಂಡಲ್‌ಗೆ ಟ್ಯಾಗ್ ಮಾಡಬಹುದು.



ಇದನ್ನು ಸೂಕ್ತ ಬಗೆಹರಿಸಲು ಸಿದ್ದರಾಮಯ್ಯ ಆರಂಭಿಸಿದ ದಿಟ್ಟ ಹೆಜ್ಜೆಯಾಗಿದೆ. ಈ ಮೂಲಕ ಜಟಿಲ ಹಾಗೂ ದೀರ್ಘ ಕಾಲ ಬಗೆಹರಿಯದ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ವೇದಿಕೆ ಕಲ್ಪಿಸಿದಂತಾಗಿದೆ.



ದೂರು ನೀಡುವ ಮಂದಿ ತಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತು ಅವರು ಮುಂದಿಡುತ್ತಿರುವ ಸಮಸ್ಯೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu