ಮಂಗಳೂರು: ವಿದ್ಯಾರ್ಥಿನಿಯನ್ನು ಲಾಡ್ಜ್ ನಲ್ಲಿರಿಸಿ ನಿರಂತರ ಅತ್ಯಾಚಾರ - ಕಡಬದ ವಿವಾಹಿತ ಅರೆಸ್ಟ್


ಮಂಗಳೂರು: ವಿದ್ಯಾರ್ಥಿನಿಯೋರ್ವಳನ್ನು ವಿವಾಹವಾಗುವೆನೆಂದು ನಂಬಿಸಿ 20 ದಿನಗಳ ಕಾಲ ಲಾಡ್ಜ್ ಲ್ಲಿರಿಸಿ ನಿರಂತರ ಅತ್ಯಾಚಾರಗೈದ ವಿವಾಹಿತನನ್ನು ಮಂಗಳೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಡಬ ಮೂಲದ ಅನೀಶ್ ರೆಹಮಾನ್ ಬಂಧಿತ ಕಾಮುಕ.

ಇನ್ ಸ್ಟಾಗ್ರಾಂನಲ್ಲಿ ವಿದ್ಯಾರ್ಥಿನಿಗೆ ಅನೀಶ್ ರೆಹಮಾನ್ ಪರಿಚಿತನಾಗಿದ್ದಾನೆ. ಆ ಬಳಿಕ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಮಂಗಳೂರಿನ ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ಗೆ  ಕರೆದೊಯ್ದಿದ್ದಾನೆ. ಲಾಡ್ಜ್ ರೂಂ ಪಡೆದ ಆತ ಮೇ 28ರಿಂದ ಸುಮಾರು 20 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಆ ಬಳಿಕ ಆರೋಪಿ ತಾನು ವಿವಾಹಿತ ಎಂಬ ಸತ್ಯವನ್ನು ತಿಳಿಸಿದ್ದಾನೆ. ಇದರಿಂದ ಕಂಗಾಲಾದ ವಿದ್ಯಾರ್ಥಿನಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಇದೀಗ ಮಹಿಳಾ ಠಾಣಾ ಪೊಲೀಸರು ಆರೋಪಿ ಅನೀಶ್ ರೆಹಮಾನ್ ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu