ಪ್ರೀತಿಸಿದ ಕನ್ಯೆಯ ಕೈಹಿಡಿಯಲು ಇಸ್ಲಾಂ ಧರ್ಮ ತೊರೆದು ಹಿಂದೂವಾದ ಯುವಕ

ನರಸಿಂಗ್‌ಪುರ: ಮುಸ್ಲಿಂ ಯುವಕನೋರ್ವನು ತಾನು ಪ್ರೀತಿ ಮಾಡಿದ ಯುವತಿಯನ್ನು ವರಿಸಲು ಹಿಂದೂ ಧರ್ಮ ಸ್ವೀಕರಿಸಿದ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ ಎಂಬಲ್ಲಿ ನಡೆದಿದೆ.

ಮೂಲತಃ ನರಸಿಂಗ್‌ಪುರ ನಿವಾಸಿ ಫಾಜಿಲ್ ಖಾನ್ ತಮ್ಮ ಪ್ರೇಯಸಿ ಸೋನಾಲಿಯನ್ನು ಬಹು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರು ಆಕೆಯನ್ನು ವಿವಾಹವಾಗಲು ಬಯಸಿ ಗುರುವಾರದಂದು ಹಿಂದೂ ಧರ್ಮವನ್ನು ಸ್ವೀಕರಿಸಿ ತನ್ನ ಹೆಸರನ್ನು ಅಮನ್ ರೈ ಎಂದು ಬದಲಿಸಿಕೊಂಡಿದ್ದಾರೆ. ಕರೇಲಿರಾಮ್ ದೇವಾಲಯದಲ್ಲಿ ಸೋನಾಲಿ ಹಾಗೂ ಅಮನ್ ರೈ ವಿವಾಹವು ನೆರವೇರಿದ್ದು, ಮದುವೆಗೆ ಎರಡು ಮನೆಯವರು ಸಾಕ್ಷಿಯಾಗಿದ್ದಾರೆ.

ಅಲ್ಲದೇ, ಈಗಾಗಲೇ ವಿವಾಹ ನೋಂದಣಿಗಾಗಿ ಈ ದಂಪತಿ ಅರ್ಜಿ ಸಲ್ಲಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಅಮನ್ ರೈ ತಂದೆ ಮೊದಲು ಹಿಂದೂವಾಗಿದ್ದರು. ಆದರೆ ಅವರ ತಾಯಿ ಮುಸ್ಲಿಂ ಆಗಿದ್ದರು. ಹಲವು ವರ್ಷಗಳ ಹಿಂದೆ ಹಿಂದೂ ಧರ್ಮವನ್ನು ತೊರೆದು ಇಸ್ಲಾಂಗೆ ಮತಾಂತರಗೊಂಡು ವಿವಾಹವಾಗಿದ್ದರು.

ಈ ಬಗ್ಗೆ ಮಾತನಾಡಿದ ಅಮನ್, ನನ್ನ ತಂದೆ ನನ್ನ ತಾಯಿಗಾಗಿ ಧರ್ಮ ಬದಲಾಯಿಸಿದ್ದರು. ನಾನು ನನ್ನ ಪತ್ನಿಗಾಗಿ ನನ್ನ ಧರ್ಮವನ್ನು ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu