-->
1000938341
ಮಟನ್ ಊಟವಿಲ್ಲವೆಂದು ಖ್ಯಾತೆ ತೆಗೆದ ವರ: ವಧು ಕೊಟ್ಟದ್ದು ಭಾರೀ ಶಾಕ್

ಮಟನ್ ಊಟವಿಲ್ಲವೆಂದು ಖ್ಯಾತೆ ತೆಗೆದ ವರ: ವಧು ಕೊಟ್ಟದ್ದು ಭಾರೀ ಶಾಕ್

ನವದೆಹಲಿ: ವಿವಾಹಕ್ಕೆಂದು ಮೆರವಣಿಗೆಯಲ್ಲಿ ವಧುವಿನ ಮನೆಗೆ ಬಂದಿದ್ದ ವರ, ಮಟನ್ ವಿಚಾರಕ್ಕೆ ಖ್ಯಾತೆ ತೆಗೆದು ವಧುವಿನಿಂದ ತಿರಸ್ಕೃತನಾಗಿ ವಾಪಸ್ ಬಂದ ವಿಲಕ್ಷಣ ಘಟನೆ ವರದಿಯಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ವರ, ರವಿವಾರ ತನ್ನ ಮನೆಯವರೊಂದಿಗೆ ಮೆರವಣಿಗೆಯಲ್ಲಿ ಸಂಬಲ್‌ಪುರದ ಐಂತಪಾಲಿಯಲ್ಲಿರುವ ವಧುವಿನ ಮನೆಗೆ ತಲುಪಿದ್ದಾನೆ. ಆದರೆ ಊಟದ ಸಂದರ್ಭ ಕೊನೆಯ ಏಳೆಂಟು ಮಂದಿಗೆ ಮಟನ್ ಕಡಿಮೆಯಾಗಿದೆ. ಆಗಲೇ ತಡರಾತ್ರಿಯಾಗಿದ್ದು, ವಧುವಿನ ಮನೆಯವರು ಮಟನ್ ವ್ಯವಸ್ಥೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ವರನ ಕಡೆಯವರಿಗೆ ಮಟನ್ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು. ಈ ವರ್ತನೆಯಿಂದ ಅಸಮಾಧಾನಗೊಂಡ ವಧು, ಕಡೆಗೆ ಮದುವೆಯನ್ನೇ ಕ್ಯಾನ್ಸಲ್ ಮಾಡಲು ನಿರ್ಧರಿಸಿದ್ದಾಳೆ.

ಘಟನೆಯ ಕುರಿತು ಮಾತನಾಡಿದ ವಧು, “ಎಲ್ಲವೂ ಇತ್ತು. ಮಟನ್ ಕೂಡ ಬಡಿಸಲಾಗಿದೆ. ಆದರೆ ಕೊನೆಯ ಆರೇಳು ಮಂದಿಗೆ ಮಟನ್ ಲಭ್ಯವಾಗಿರಲಿಲ್ಲ. ಇದಕ್ಕರ ಅವರು ನನ್ನ ತಂದೆಯ ಮೇಲೆ ಅಸಮರ್ಪಕ ನಿರ್ವಹಣೆಯ ಆರೋಪ ಮಾಡಿ ಜಗಳವಾಡಿದ್ದಾರೆ. ನನ್ನ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಸುಮ್ಮನಿರಲು ಅವರನ್ನು ಕೇಳಿಕೊಂಡಿದ್ದು ಮಟನ್ ಬದಲಿಗೆ ಕೋಳಿ ಮತ್ತು ಮೀನು ನೀಡುವ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಮಟನ್ ಮಾತ್ರವೇ ಬೇಕು ಎಂದು ಕೇಳಿದ್ದಾರೆ. ಇದಾದ ಬಳಿಕ ಅವರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಎಂದು ವಧು ಹೇಳಿದರು.

ನನ್ನ ತಂದೆ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿ ವಿಚಾರವನ್ನು ಬಗೆಹರಿಸುವಂತೆ ಮನವಿ ಮಾಡಿದರು. ಆದರೆ ಅವರು ಮಾತ್ರ ಒಪ್ಪಲೇ ಇಲ್ಲ. ಇದರಿಂದ ನನಗೆ ಬೇಜಾರಾಗಿದ್ದು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ ಎಂದು ವಧು ವಿವರಿಸಿದರು.

ಮತ್ತೊಂದೆಡೆ, ವರನ ಕಡೆಯವರು, ವಧುವಿನ ಕಡೆಯವರು ಮಾಡಿರುವ ಆರೋಪಗಳು ಸಂಪೂರ್ಣವಾಗಿ ನಿರಾಧಾರ ಎಂದು ಹೇಳಿದ್ದಾರೆ. “200 ಜನರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ. ಮೆರವಣಿಗೆಯಲ್ಲಿ ಸುಮಾರು 150 ಜನರಿದ್ದರು. ಆದರೆ ಅವರಲ್ಲಿ ಹಲವರಿಗೆ ಊಟ ಇರಲಿಲ್ಲ. ಈ ವಿಷಯವನ್ನು ನನ್ನ ತಂದೆ, ವಧುವಿನ ಚಿಕ್ಕಪ್ಪನಿಗೆ ತಿಳಿಸಿದಾಗ ಅವರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಮದುವೆಯ ರದ್ದತಿಗೆ ಮಟನ್ ಕಾರಣವಲ್ಲ” ವರ ಹೇಳಿದರು. ರಾತ್ರಿ 12ರಿಂದ ಬೆಳಗಿನ ಜಾವ 4ರವರೆಗೆ ಮಾತುಕತೆ ನಡೆಸಲಾಗಿದ್ದು, ಮದುವೆಗೆ ಹಲವು ಬಾರಿ ಮನವಿ ಮಾಡಿದರೂ ನಿರಾಕರಿಸಿದರು ಎಂದು ವರನ ತಂದೆ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article