ಅದೃಷ್ಟ ಅಂದರೆ ಹೀಗಿರಬೇಕು: ಲಾಟರಿಯಲ್ಲಿ ಬರೋಬ್ಬರಿ 45 ಕೋಟಿ ರೂ. ಗೆದ್ದ ನರ್ಸ್


ಕೇರಳ: ಅಬುಧಾಬಿಯ ಬಿಗ್ ಟಿಕೆಟ್ ಲಾಟರಿಯಲ್ಲಿ ಕೇರಳದ ನರ್ಸ್‌ವೊಬ್ಬರು 45 ಕೋಟಿ ರೂ. ಭಾರೀ ಮೊತ್ತದ ನಗದು ಗೆಲ್ಲುವ ಮೂಲಕ ಸುದ್ದಿಯಾಗಿದ್ದಾರೆ.

ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಲವ್ಲಿ ಮೋಲ್ ಅಚ್ಚಮ್ಮ(45) ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ (20 ಮಿಲಿಯನ್ ಯುಎಇ ದಿರ್ಹಮ್) 45 ಕೋಟಿ ರೂಪಾಯಿ ಹಣ ಗೆದ್ದಿರುವ ಅದೃಷ್ಟವಂತೆ.

ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾದಲ್ಲಿ ಲವ್ಲಿ ಮೋಲ್ ಅಚ್ಚಮ್ಮ 45 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಇವರು ಕಳೆದ 21 ವರ್ಷಗಳಿಂದ ತಮ್ಮ ಕುಟುಂಬದೊಂದಿಗೆ  ಅಬುಧಾಬಿಯಲ್ಲಿ ನೆಲೆಸಿದ್ದಾರೆ. ಇದೀಗ ಈ ಬಿಗ್ ಟಿಕೆಟ್ ಲಾಟರಿಯಿಂದ ಅವರ ಅದೃಷ್ಟ ಖುಲಾಯಿಸಿದೆ. 

ಈ ಕುರಿತಾಗಿ ಮಾತನಾಡಿದ ಲವ್ಲಿ ಮೋಲ್ ಅಚ್ಚಮ್ಮ, ನನ್ನ ಪತಿಯವರು ಪ್ರತಿ ತಿಂಗಳು ಅಬುಧಾಬಿ ಬಿಗ್ ಟಿಕೆಟ್ ಲಾಟರಿ ತೆಗೆದುಕೊಳ್ಳುತ್ತಿದ್ದರು. ಬಹುಮಾನದ ಮೊತ್ತದ ಒಂದು ಭಾಗವನ್ನು ತನ್ನ ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇನೆ. ಬಾಕಿ ಹಣವನ್ನು ತನ್ನ ಮಕ್ಕಳ ಶಿಕ್ಷಣಕ್ಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu