-->

ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿ- ಏಷ್ಯಾಟಿಕ್ ಸಿಂಹ, ತೋಳ, ಸ್ವರ್ಣ ಬಣ್ಣದ ನರಿ ಆಗಮನ

ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿ- ಏಷ್ಯಾಟಿಕ್ ಸಿಂಹ, ತೋಳ, ಸ್ವರ್ಣ ಬಣ್ಣದ ನರಿ ಆಗಮನ


ಮಂಗಳೂರು; ಗುಜರಾತ್ ನ ರಾಜಕೋಟ್ ಮೃಗಾಲಯ ಮತ್ತು ಪಿಲಿಕುಳ ಜೈವಿಕ ಉದ್ಯಾನವನದ ಮಧ್ಯೆ ನಡೆದ ಪ್ರಾಣಿವಿನಿಮಯ ಒಪ್ಪದಂತೆ, ಪಿಲಿಕುಳಕ್ಕೆ ಒಂದು ಏಷ್ಯಾಟಿಕ್ ಸಿಂಹ, ಎರಡು ತೋಳಗಳು ಎರಡು ಸ್ವರ್ಣ ಬಣ್ಣದ ನರಿಗಳು, ಅಪರೂಪದ ಕೊಂಬ್ ಬಾತು 3 ಬಣ್ಣದ ಪೆಸೆಂಟ್‌ ಪಕ್ಷಿಗಳು ಆಗಮಿಸಿದೆ .

ಪಿಲಿಕುಳ ಮೃಗಾಲಯದಿಂದ ನಾಲ್ಕು ಕಾಡು ನಾಯಿಗಳು, ಒಂದು ಚಿರತೆ ಎರಡು ಸಿವೆಟ್‌ಬೆಕ್ಕು, ನಾಲ್ಕು ರೆಟಿಕ್ಯೂಲೇಟೆಡ್ ಹೆಬ್ಬಾವು, ನಾಲ್ಕು ಮೋಂಟೇನ್ ಹಾವು, ವೈನ್ ಹಾವು, ಮರಳು ಹಾವುಹಳನ್ನು ರಾಜಕೋಟ್‌ ಗೆ ಕಳುಹಿಸಿ ಕೊಡಲಾಗಿದೆ.


 ಪ್ರಾಣಿ ವಿನಿಮಯಕ್ಕೆ ದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿತ್ತು ಪಿಲಿಕುಳಕ್ಕೆ ಆಗಮಿಸಿದ ತೋಳ ಅಪಾಯದಂಚಿನಲ್ಲಿರುವ ಪಾಣಿ ಎಂದು ಗುರುತಿಸಲ್ಪಟ್ಟಿದೆ, ಈ ಹಿಂದೆ ಸಾಮಾನ್ಯವಾಗಿ ಕಾಣಿಸಿಗುತಿದ್ದು ತೋಳಗಳು ಈಗ ಭಾರತದಲ್ಲಿ ಕಾಣುವುದು ಅಪರೂಪ, ಪಿಲಿಕುಲದಲ್ಲಿ ಅಪಾಯದಂಚಿನಲ್ಲಿರುವ ಪ್ರಾಣಿಗಳಾದ ಕಾಡುನಾಯಿಗಳು, ಹೈನಗಳು ಸಂತಾನಾಭಿವೃದ್ಧಿಗೊಳಿಸುತ್ತಿರುವುದು ಮೃಗಾಲಯದ ಅಧಿಕಾರಿಗಳಿಗೆ ಸಂತಸ ತಂದಿದೆ .

ತೋಳಗಳಿಗಾಗಿ ರಿಲಯನ್ಸ್ ಫೌಂಡೇಷನ್ ನೀಡಿದ ದೇಣಿಗೆಯಲ್ಲಿ ವಿಶಾಲವಾದ ಆವರಣ ನಿರ್ಮಿಸಲಾಗುತ್ತಿದೆ.

ಸದ್ಯಕ್ಕೆ ಹೊಸದಾಗಿ ಆಗಮಿಸಿದ ಪ್ರಾಣಿಗಳು ಪರಿಸರಕ್ಕೆ ಹೊಂದಿಕೊಳಲು ಕ್ವಾರಂಟೈನಲ್ಲಿ ಇಡಲಾಗಿದೆ, ಕೆಲವು ಸಮಯದ ನಂತರ ಇವುಗಳನ್ನು ಸಾರ್ವಜನಿಕ ವೀಕ್ಷಣೆಗೆ ತೆರೆಡಿಡಲಾಗುವುದು, ಇದು ಒಂದು ತಿಂಗಳಿಂದ ಈಚಿಗೆ ಆಗಮಿಸಿದ ಪ್ರಾಣಿಗಳ ಎರಡನೇ ಕಂತು ಆಗಿದೆ ಮಹಾರಾಷ್ಟ್ರದ ನಾಗಪುರ ಮೃಗಾಲಯದಿಂದ ಬಿಳಿ ಕೃಷ್ಣ ಮೃಗಗಳು, ನೀಲ್ ಗೈ ಇತ್ಯಾದಿ ಪ್ರಾಣಿಗಳು ಆಗಮಿಸಿದ್ದವು.

ಶೀಘ್ರದಲ್ಲಿ ಇನ್ನು ಹಲವು ಪ್ರಾಣಿಗಳು ದೇಶದ ಇತರ ಮೃಗಾಲಯಗಳಿಂದಪ್ರಾಣಿವಿನಿಮಯದಡಿ ಆಗಮಿಸಲಿವೆ ಎಂದು  ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಹೆಚ್, ಜೆ, ಭಂಡಾರಿ ತಿಳಿಸಿದ್ದಾರೆ

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article