ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಕಾರು : ವಿದ್ಯಾರ್ಥಿನಿ ಸೇರಿದಂತೆ ಮೂವರು ಸಾವು


ಕಾಸರಗೋಡು: ನಿಯಂತ್ರಣ ತಪ್ಪಿದ ಕಾರೊಂದು ಹೊಂಡಕ್ಕೆ ಉರುಳಿದ ಪರಿಣಾಮ ವಿದ್ಯಾರ್ಥಿನಿ ಸೇರಿದಂತೆ ಮೂವರು ಮೃತಪಟ್ಟ ಘಟನೆ ರವಿವಾರ ಸಂಜೆ ವಯನಾಡ್ ಕಲ್ಪಟ್ಟ ಸಮೀಪ ನಡೆದಿದೆ.

ಕಾಸರಗೋಡು ವೆಳ್ಳರಿಕಂಡು ನಿವಾಸಿಗಳಾದ ಸ್ನೇಹಾ ಜೋಸ್ (20), ಜಿಸ್ಟ್ರಾ ಮೇರಿ ಜೋಸೆಫ್ (20) ಮತ್ತು ಆಡೋನ್ ಬೆಸ್ಟಿ (20) ಮೃತಪಟ್ಟ ದುರ್ದೈವಿಗಳು.

ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದು ಈ ಅವಘಡ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅವಘಡದಲ್ಲಿ ಆಡೋನ್‌ ತಮ್ಮ ಸಹೋದರಿ ಡಿಯೋನಾ ಬೆಸ್ಟಿ, ಸ್ನೇಹಾ ಅವರ ಸಹೋದರಿ ಸೋನಾ ಜೋಸೆಫ್ ಮತ್ತು ಸಾಂಜೋ ಜೋಸ್ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
BREAKING NEWS
Loading latest news...
Join our WhatsApp Channel Powered By : Online Pudu