-->
ಉಡುಪಿಯಲ್ಲಿ ರಘುಪತಿ ಭಟ್ ಗೆ BJP ಟಿಕೆಟ್ ಮಿಸ್ ?- ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವ ಆ ನಾಲ್ವರು..

ಉಡುಪಿಯಲ್ಲಿ ರಘುಪತಿ ಭಟ್ ಗೆ BJP ಟಿಕೆಟ್ ಮಿಸ್ ?- ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವ ಆ ನಾಲ್ವರು..


ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ  ಶಾಸಕ ರಘುಪತಿ ಭಟ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ರಘುಪತಿ ಭಟ್ ಬಿಜೆಪಿಯ ಪ್ರಮುಖ ನಾಯಕ. ಕಳೆದ ಎರಡು ದಶಕಗಳಿಂದ ಒಂದು ಬಾರಿ ಹೊರತುಪಡಿಸಿದರೆ ಅವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದವರು. ಆದರೆ ಈ ಬಾರಿ ರಘುಪತಿ ಭಟ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

ಉಡುಪಿ ಐದು‌ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಶಾಸಕರಿದ್ದಾರೆ.ಈ ಬಾರಿ ಹಲವು ಶಾಸಕರಿಗೆ ಟಿಕೆಟ್ ತಪ್ಪಲಿದೆ ಎಂಬುದು ಚರ್ಚೆಯಾಗುತ್ತಿದೆ. ಇದರಲ್ಲಿ ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಅವರು ಇದ್ದಾರೆ ಎಂದು ಮೂಲಗಳಿಂದ ಬಂದಿರುವ ಮಾಹಿತಿ.

ರಘುಪತಿ ಭಟ್ ಅವರಿಗೆ ಟಿಕೆಟ್ ಕೈತಪ್ಪಿದರೆ ಬಿಜೆಪಿ ಟಿಕೆಟ್ ಯಾರಿಗೆ ಸಿಗಬಹುದು ಎಂಬುದು ಕುತೂಹಲ ಕೆರಳಿಸಿದೆ.

ಉಡುಪಿ ಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಫೈಟ್ ಮಾಡುತ್ತಿರುವವರು

ಯಶ್ ಪಾಲ್ ಸುವರ್ಣ

ಯಶ್ ಪಾಲ್ ಸುವರ್ಣ ಹಲವು ಸಮಯಗಳಿಂದ ಶಾಸಕ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಕಾಪು ವಿನಲ್ಲಿ ಟಿಕೆಟ್ ಗಾಗಿ ಕಣ್ಣಿಟ್ಟಿದ್ದ ಅವರು ಉಡುಪಿ ಯಲ್ಲಿ ರಘುಪತಿ ಭಟ್ ಗೆ ಟಿಕೆಟ್ ತಪ್ಪುತ್ತಿರುವ ಮಾಹಿತಿಯಿಂದ ಉಡುಪಿಯಲ್ಲಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.


ಪ್ರಮೋದ್ ಮಧ್ವರಾಜ್

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್ ಉಡುಪಿ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು  ವರಿಷ್ಠರ ಮೂಲಕ ಒತ್ತಡ ಹಾಕುತ್ತಿದ್ದಾರೆ. 

ವಿಜಯ್ ಕೊಡವೂರು

ಆರ್ ಎಸ್ ಎಸ್ ಮೂಲದ ವಿಜಯ್ ಕೊಡವೂರು ಉಡುಪಿ ಬಿಜೆಪಿ ಟಿಕೆಟ್ ಗಾಗಿ ಪ್ರಯತ್ನ ಪಡುತ್ತಿದ್ದಾರೆ.

ಸುಪ್ರಸಾದ್ ಶೆಟ್ಟಿ ಬೈಕಾಡಿ

ಇನ್ನೂ ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನಿವೃತ್ತಿಯಾದ ಕಾರಣ ಕೈ ತಪ್ಪುತ್ತಿರುವ ಬಂಟರ ಸೀಟ್ ನ್ನು ಉಡುಪಿ ಯಲ್ಲಿ ನೀಡಬೇಕೆಂಬ ಲೆಕ್ಕಾಚಾರ ಮಾಡಿ ಸುಪ್ರಸಾದ್ ಶೆಟ್ಟಿ ಉಡುಪಿಯಲ್ಲಿ ಟಿಕೆಟ್ ನಿರೀಕ್ಷಿಸುತ್ತಿದ್ದಾರೆ.

ಉಡುಪಿಯಲ್ಲಿ ರಘುಪತಿ ಭಟ್ ಅವರಿಗೆ ಟಿಕೆಟ್ ತಪ್ಪುತ್ತಿರುವುದರಿಂದ ನಾಲ್ಕು ಮಂದಿ ಟಿಕೆಟ್ ಗಾಗಿ ತೀವ್ರ ಪ್ರಯತ್ನ ಪಡುತ್ತಿದ್ದಾರೆ. ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article