ಮಂಗಳೂರು: ಹೋಳಿ ಡಿಜೆ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರ ದಾಳಿ



ಮಂಗಳೂರು: ನಗರದ ಮರೋಳಿಯಲ್ಲಿ ನಡೆಯುತ್ತಿದ್ದ ಹೋಳಿ ಡಿಜೆ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಬಜರಂಗದಳ ಕಾರ್ಯಕರ್ತರು ಆಗಮಿಸಿ ದಾಂಧಲೆ ನಡೆಸಿದ ಘಟನೆ ರವಿವಾರ ನಡೆದಿದೆ.

'ರಂಗ್ ದೇ ಬರ್ಸಾ' ಎಂಬ ಹೆಸರಿನಲ್ಲಿ ಈ ಹೋಳಿ ಆಚರಣೆ ನಡೆಯುತ್ತಿತ್ತು. ಈ ಸಂಭ್ರಮದ ಹೋಳಿ ಆಚರಣೆಯ ಡಿಜೆ ಪಾರ್ಟಿಯೊಂದಿಗೆ ಯುವಕ-ಯುವತಿಯರು ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು. ಈ ವೇಳೆ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಆರು ಮಂದಿ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ, ಅಶ್ಲೀಲ ವರ್ತನೆ ಎಂದು ಆರೋಪಿಸಿ ದಾಂಧಲೆ ನಡೆಸಿದ್ದಾರೆ. ಜೊತೆಯ ಅನ್ಯಕೋಮಿನ ಯುವಕರೊಂದಿಗೆ ಹೋಳಿ ಆಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು ಹೋಳಿ ಸಂಭ್ರಮದ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದು ದಾಂಧಲೆ ನಡೆಸಿದ್ದಾರೆ. ಈ ವೇಳೆ ಬಜರಂಗದಳ ಕಾರ್ಯಕರ್ತರು ಹಾಗೂ ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಆರು ಮಂದಿ ಬಜರಂಗದಳ ಕಾರ್ಯಕರ್ತರು ವಶಕ್ಕೆ ತೆಗೆದುಕೊಂಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu