ಮಂಗಳೂರು: ಕರಾವಳಿಯಲ್ಲಿ ಬಿಸಿಗಾಳಿ ನಾಳೆಯೂ ಮುಂದುವರಿಯುವ ಸಾಧ್ಯತೆ


ಮಂಗಳೂರು: ಕೊಂಕಣ ಗೋವಾ ಹಾಗೂ ಕರಾವಳಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿ ಗಾಳಿ ಇಂದು ಬೀಸಿದ್ದು, ನಾಳೆಯೂ ಅದು ಮುಂದುವರಿಯುವ ಸಂಭವವಿದೆ ಎಂದು ವರದಿಯಾಗಿದೆ.

ಈಗಾಗಲೇ ಬಿಸಿಗಾಳಿ ಬೀಸುತ್ತಿದ್ದು, ಶುಕ್ರವಾರ ಕೂಡಾ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಣಂಬೂರಿನಲ್ಲಿ ಗರಿಷ್ಠ 38.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಮಂಗಳೂರು ನಗರದಲ್ಲಿ 36.5 ಸರಾಸರಿ ಉಷ್ಣಾಂಶ ದಾಖಲಾಗಿದೆ. ಕಾರವಾರ 38.6, ಬ್ರಹ್ಮಾವರ (ಎಡಬ್ಲ್ಯುಎಸ್) 38.4, ಹೊನ್ನಾವರದಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮಂಗಳೂರು ನಗರದಲ್ಲಿ ಹಲವು ದಿನಗಳಿಂದ ವಿಪರೀತ ಬಿಸಿಯಾದ ವಾತಾವರಣ ಇದೆ. ಪುತ್ತೂರು, ಕಡಬದಲ್ಲಿ ಹಲವರಿಗೆ ಬಿಸಿ ಗಾಳಿಯ ಅನುಭವವಾಗಿದೆ ಎಂದು ತಿಳಿದು ಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu