-->
92ನೇ ವರ್ಷದಲ್ಲಿ ಐದನೇ ವಿವಾಹವಾಗಲಿರುವ ರುಪರ್ಟ್ ಮುರ್ಡೋಕ್ : ಇದು ಕೊನೆಯದ್ದು ಎಂದ ಮಾಧ್ಯಮ ಲೋಕದ ದೊರೆ

92ನೇ ವರ್ಷದಲ್ಲಿ ಐದನೇ ವಿವಾಹವಾಗಲಿರುವ ರುಪರ್ಟ್ ಮುರ್ಡೋಕ್ : ಇದು ಕೊನೆಯದ್ದು ಎಂದ ಮಾಧ್ಯಮ ಲೋಕದ ದೊರೆ


ನ್ಯೂಯಾರ್ಕ್‌: ಶತಕೋಟಿ ಉದ್ಯಮಿ, ಮಾಧ್ಯಮ ಲೋಕದ ದೊರೆ ರೂಪರ್ಟ್ ಮುರ್ಡೋಕ್ 92 ವರ್ಷದಲ್ಲಿ ಐದನೇ ವಿವಾಹವಾಗಲಿದ್ದಾರೆ.

ರೂಪರ್ಟ್ ಮುರ್ಡೋಕ್ ಅವರು ಮಾಡೆಲ್ ಹಾಗೂ ನಟಿ ಜೆರ್ರಿ ಹಾಲ್ ಯವರಿಗೆ ವಿಚ್ಛೇದನ ನೀಡಿದ 8 ತಿಂಗಳ ಬಳಿಕ 66 ವರ್ಷದ ಆನ್ ಲೆಸ್ಲಿ ಸ್ಮಿತ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನ್ಯೂಯಾರ್ಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರು ಮುರ್ಡೋಕ್, ನಾನು ಪ್ರೀತಿಯಲ್ಲಿ ಬೀಳಲು ಬಹಳ ಹೆದರುತ್ತಿದ್ದೆ. ಆದರೆ ಇದು ನನ್ನ ಕೊನೆಯದು ಎಂದು ನನಗೆ ತಿಳಿದಿತ್ತು. ಈಗ ನಾನು ಸಂತೋಷವಾಗಿದ್ದೇನೆ. ನಾವಿಬ್ಬರೂ ನಮ್ಮ ಜೀವನದ ದ್ವಿತೀಯಾರ್ಧವನ್ನು ಜೊತೆಯಾಗಿ ಕಳೆಯಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಫ್ಯಾಕ್ಸ್ ನ್ಯೂಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಟ್ಯಾಬ್ಲಾಯ್ಡ್ ಪತ್ರಿಕೆ 'ದಿ ಸನ್' ನ ಮಾಲೀಕರಾಗಿರುವ ಮುರ್ಡೋಕ್‌ ಮೊದಲ ಮೂವರು ಪತ್ನಿಯರಲ್ಲಿ 6 ಮಂದಿ ಮಕ್ಕಳನ್ನು ಪಡೆದಿದ್ದಾರೆ. 

ಮುರ್ಡೋಕ್ ಹಾಗೂ ಆನ್ ಲೆಸ್ಲಿ ಸ್ಮಿತ್ ಈ ಬೇಸಿಗೆಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. 14 ವರ್ಷಗಳ ಹಿಂದೆ ಆನ್ ಲೆಸ್ಲಿ ಸ್ಮಿತ್ ಪತಿ ಮೃತಪಟ್ಟಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಮುರ್ಡೋಕ್ ಹಾಗೂ ಆನ್ ಲೆಸ್ಲಿ ಸ್ಮಿತ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ವೇಳೆ ಈ ಜೋಡಿ ಸಣ್ಣಮಟ್ಟಿಗೆ ಸಂವಾದ ನಡೆಸಿತ್ತು. ಎರಡು ವಾರದ ಬಳಿಕ ಮುರ್ಡೋಕ್‌ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರು.

ಮಾಡಲ್‌ ಹಾಗೂ ನಟಿ ಜೆರ್ರಿ ಹಾಲ್‌ರನ್ನು ಮುರ್ಡೋಕ್‌ ಮದುವೆಯಾಗಿ ಆರು ವರ್ಷ ಸಂಸಾರ ನಡೆಸಿ ಕಳೆದ ವರ್ಷ ಡಿವೋರ್ಸ್‌ ನೀಡಿದ್ದರು. ಅದಕ್ಕೂ ಮುನ್ನ 1999 ರಿಂದ 2013ರವರೆಗೆ ವೆಂಡಿ ಡೆಂಗ್‌, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್‌, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್‌ ಜೊತೆ ಮುರ್ಡೋಕ್‌ ಜೀವನ ನಡೆಸಿದ್ದರು. ರುಪೋರ್ಟ್‌ ಮುರ್ಡೋಕ್‌ ಫ್ಯಾಕ್ಸ್‌ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಇದು ಫಾಕ್ಸ್‌ ಬ್ರಾಡ್‌ಕಾಸ್ಟಿಂಗ್‌, ಫಾಕ್ಸ್‌ ಸ್ಪೋರ್ಟ್ಸ್‌, ಫಾಕ್ಸ್‌ ಬ್ಯುಸಿನೆಸ್‌ ಹಾಗೂ ಫಾಕ್ಸ್‌ ನ್ಯೂಸ್‌ನ ಮಾಲೀಕತ್ವವನ್ನು ಹೊಂದಿದೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article