ಮಂಗಳೂರು: ಎಸಿ ಮೆಷಿನ್ ಫಿಟ್ ವೇಳೆ ನಡೆಯಿತು ಘೋರ ದುರಂತ - 9ನೇ ಮಹಡಿಯಿಂದ ಬಿದ್ದು ಯುವಕನ ದಾರುಣ ಸಾವು


ಮಂಗಳೂರು: ಎಸಿ ಮೆಷಿನ್ ಫಿಟ್ ಮಾಡಲು ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನು 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ಸಂಜೆ 6 ಗಂಟೆ ನಗರದ ನಂತೂರಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವ್ರೋ(23) ಮೃತಪಟ್ಟ ದುರ್ದೈವಿ. 


ನಂತೂರಿನ ಹಮಾರಾ ರೆಫ್ರಿಜರೇಟರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ತಾವ್ರೋ ಇಂದು ಸಂಜೆ ನಂತೂರಿನಲ್ಲಿರುವ ಮೌಂಟ್ ಟಿಯಾರಾ ಅಪಾರ್ಟೆಂಟ್ ನಲ್ಲಿ ಹೊಸದಾಗಿ ಎಸಿ ಮೆಷಿನ್ ಫಿಟ್ ಮಾಡುತ್ತಿದ್ದರು. ಅವರು ಈ ಅಪಾರ್ಟ್ ಮೆಂಟ್ ನ 9ನೇ ಮಹಡಿಯ ಫ್ಲ್ಯಾಟ್ ನ ಆವರಣ ಗೋಡೆಯ ಹೊರಭಾಗದಲ್ಲಿ ಮತ್ತೋರ್ವ ಯುವಕನೊಂದಿಗೆ ಮೆಷಿನ್ ಫಿಟ್ ಮಾಡುತ್ತಿದ್ದರು. ಈ ವೇಳೆ ವಿನಯ್ ಏಕಾಏಕಿ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರು ತಲೆ ಒಡೆದು ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿದ್ದು ವಿನಯ್ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ವಿನಯ್ ಇತ್ತೀಚೆಗಷ್ಟೆ ಎಸಿ ಕಂಪೆನಿಗೆ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ‌.
BREAKING NEWS
Loading latest news...
Join our WhatsApp Channel Powered By : Online Pudu