ಸೊಳ್ಳೆ ಕಾಯಿಲ್ ಹಚ್ಚಿ ಒಂದೇ ಕುಟುಂಬದ 6 ಮಂದಿ ಸಾವು

 


ದೆಹಲಿ: ಸೊಳ್ಳೆ ನಿವಾರಕ ಬತ್ತಿಯನ್ನು  ರಾತ್ರಿಯಿಡಿ ಹಚ್ಚಿದ ಕಾರಣ  ಉಸಿರುಗಟ್ಟಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.

 

ರಾತ್ರಿಯಿಡೀ ಬಿಡುಗಡೆಯಾದ ವಿಷಕಾರಿಕ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬ ಆರು ಜನ ಸಾವನ್ನಪ್ಪಿರುವ ಘಟನೆ ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.

 

ಒಂದೇ ಕುಟುಂಬದ  ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದವರು ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ವಾಸಿಸುತ್ತಿದ್ದರು . ರಾತ್ರಿ ಮಲಗಿದ್ದಾಗ ಸೊಳ್ಳೆ ನಿವಾರಕ ಬತ್ತಿಯನ್ನು ಹಚ್ಚಿದ ಪರಿಣಾಮವಾಗಿ ಉತ್ಪತ್ತಿಯಾದ ಕಾರ್ಬನ್ ಮಾನಾಕ್ಸೈಡ್ನಿಂದ ಉಸಿರಾಟ ಮಾಡಲು ಕಷ್ಟವಾದ ಕಾರಣ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಎಎನ್ಐಗೆ ತಿಳಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu