ದ್ವಿಚಕ್ರ ವಾಹನದಲ್ಲಿ ವೀಲಿಂಗ್ ಮಾಡಿ ಕಾಲೇಜು ಯುವತಿಯರ ಮುಂದೆ ಪೋಸು ಕೊಡಲು ಹೋಗಿ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದ ಯುವಕ


ತಿರುವನಂತಪುರಂ: ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಾ ಕಾಲೇಜು ಯುವತಿಯರ ಮುಂದೆ ಪೋಸು ಕೊಡಲು ಹೋಗಿ ಯುವಕನೊಬ್ಬ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿರುವ ಘಟನೆ ತಿರುವನಂತಪುರಂನ ಕಲ್ಲಂಬಲಮ್‌ನಲ್ ಫೆ.12ರಂದು ನಡೆದಿದೆ.

ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೌಫಲ್(18) ಎಂಬಾತ ಆರೋಪಿ ಯುವಕ. ನೌಫಲ್ ತನ್ನ ದ್ವಿಚಕ್ರ ವಾಹನದ ಮುಂಭಾಗವನ್ನು ಮೇಲಕ್ಕೆತ್ತಿ ವೀಲಿಂಗ್ ಮಾಡುವ ಮೂಲಕ ಸಾಹಸ ಪ್ರದರ್ಶಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ವೇಳೆ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಡಿಕ್ಕಿ ಹೊಡೆದಿದ್ದಾನೆ.

ಈ ಘಟನೆಯಲ್ಲಿ ಬೈಕ್ ಸವಾರ ನೌಫಲ್ ಮತ್ತು ಶಾಲಾ ವಿದ್ಯಾರ್ಥಿನಿಗೆ ಗಾಯಗಳಾಗಿವೆ. ಈತನ ವಿರುದ್ಧ ಅಪಾಯಕಾರಿ ಡ್ರೈವಿಂಗ್ ಸಂಬಂಧಿಸಿದಂತೆ 6 ಪ್ರಕರಣಗಳು ಈ ಹಿಂದೆಯೇ ದಾಖಲಾಗಿವೆ. ಇದೀಗ ಮೋಟಾರು ವಾಹನ ಇಲಾಖೆ (ಎಂವಿಡಿ) ನೌಫಾಲ್ ನ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವುದಾಗಿ ತಿಳಿಸಿದೆ.
BREAKING NEWS
Loading latest news...
Join our WhatsApp Channel Powered By : Online Pudu