ವಧುವಿನ ಮನೆಗೆ ವರ ದಿಬ್ಬಣದಲ್ಲಿ ಬಂದರೆ ಕೊಲೆ ಮಾಡಲಾಗುತ್ತದೆ: ಬೆದರಿಕೆ ಪತ್ರದಿಂದ ಗಾಬರಿಗೊಂಡ ಮದುವೆ ಗಂಡು
Wednesday, February 1, 2023
ಉತ್ತರ ಪ್ರದೇಶ: ವಧುವಿನ ಮನೆಗೆ ದಿಬ್ಬಣದಲ್ಲಿ ಸಾಗಲು ಸಿದ್ಧನಾದ ವರನೊಬ್ಬನಿಗೆ ಅಚ್ಚರಿಯೊಂದು ಕಾದಿತ್ತು. ವಧುವಿನ ಮನೆಗೆ ದಿಬ್ಬಣದಲ್ಲಿ ಬಂದಲ್ಲಿ ವರನನ್ನು ಹತ್ಯೆ ಮಾಡಲಾಗುತ್ತದೆ ಎಂಬ ಬೆದರಿಕೆ ಪತ್ರ ಕಾಣಸಿಕ್ಕಿದೆ. ಇದು ಸಂಭ್ರಮದಲ್ಲಿದ್ದ ಎಲ್ಲರನ್ನೂ ಚಿಂತೆಗೆ ತಳ್ಳಿದೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಸಂಭೋಲಿ ಕೊಟ್ಟಾಲಿ ಪ್ರದೇಶದ ಫರೀದ್‌ಪುರ ಗ್ರಾಮದಲ್ಲಿ ನಡೆದಿದೆ.
“ದುಲ್ಲೆ ರಾಜಾ... ನನಗೆ ವರ್ಚಸ್ಸು ಇದೆ. ನೀನು ಮೆರವಣಿಗೆಯೊಂದಿಗೆ ಬರಬೇಡ. ಒಂದು ವೇಳೆ ಬಂದರೆ ಕೊಲೆ ಮಾಡುತ್ತೇವೆ” ಎಂದು ಪತ್ರದಲ್ಲಿ ಬರೆದು ಮದುವೆ ಗಂಡಿಗೆ ಬೆದರಿಕೆ ಹಾಕಲಾಗಿದೆ.
ವರ ಮೊಂಟೋ ಸಿಂಗ್, ಮದುವೆಗೆ ದಿಬ್ಬಣದಲ್ಲಿ ಬರುವುದು ಬೇಡ. ಒಂದು ವೇಳೆ ಆದೇಶವನ್ನು ಮೀರಿ ಬಂದಿದ್ದೇ ಆದಲ್ಲಿ ಜೀವ ಸಹಿತ ಉಳಿಸುವುದಿಲ್ಲ. ಸಂಭ್ರಮದ ದಿಬ್ಬಣವನ್ನು ಸ್ಮಶಾನವನ್ನಾಗಿ ಮಾಡುತ್ತೇನೆ. ಹಬ್ಬದ ಸಂಭ್ರಮದಲ್ಲಿ ಮಾತ್ರೆಗಳನ್ನು ತಿನ್ನುವಂತೆ ಮಾಡಿಕೊಳ್ಳಬೇಡ. ಇದು ಸದ್ಯದ ಟ್ರೇಲರ್. ಪೂರ್ತಿ ಸಿನಿಮಾವನ್ನು ಬಾರಾತ್‌ನಲ್ಲಿ ಮೂಡಿ ಬರಲಿದೆ. ಇಂತಿ ನಿನ್ನ ಸ್ನೇಹಿತ ಡಿಫಾಲ್ಟರ್ ಎಂದು ಬರೆಯಲಾಗಿದೆ.
ಬೆದರಿಕೆ ಪತ್ರಗಳನ್ನು ವರನ ಮನೆಯ ಹೊರಗೆ ಮತ್ತು ಸುತ್ತಲಿನ ಸ್ಥಳಗಳಲ್ಲಿ ಅಂಟಿಸಲಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ತನಿಖೆಗೆ ಆಗ್ರಹಿಸಲಾಗಿದೆ. ಸದ್ಯ ವರನಿಗೆ ಬಂದಿರುವ ಬೆದರಿಕೆ ಪತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್