ಪತ್ನಿಯನ್ನು ಕೊಂದು ಶವ ಸಂಭೋಗ ನಡೆಸಿದ ಪಾಪಿ ಪತಿ: ನಾಪತ್ತೆ ನಾಟಕವಾಡಿದ ಪತಿಯೇ ಕೊಲೆಗಾರ ಎಂದು ಪೊಲೀಸರು ಪತ್ತೆಹಚ್ಚಿದ್ದೇ ರೋಚಕ


ಕೊಚ್ಚಿ: ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಂದು ಶವದೊಂದಿಗೆ ಸಂಭೋಗ ನಡೆಸಿರುವ ಭೀಕರ ಘಟನೆ ಕೇರಳ ರಾಜ್ಯದ ಕಾಲಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಲಡಿ ನಿವಾಸಿ ಮಹೇಶ್ ಕುಮಾರ್ (38) ಬಂಧಿತ ಆರೋಪಿ. 

ಮೃತದೇಹದಲ್ಲಿ ದೊರೆತ ಮತ್ತೊಂದು ದೇಹದ ದ್ರವದ ಆಧಾರದನ್ವಯ ಮಹೇಶ್ ಕೊಲೆ ಮಾಡಿದ್ದಾನೆಂದು ತನಿಖೆಯಿಂದ ಬಯಲಾಗಿದೆ. ಈತ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಜೊತೆಗೆ, ಲೈಂಗಿಕ ಕ್ರಿಯೆ ನಡೆಸಿರುವ ಬಗ್ಗೆಯೂ ಸಾಕ್ಷಿ ಲಭ್ಯವಾಗಿದೆ. ಆದರೆ, ಕೊಲೆಗೂ ಮೊದಲು ಅಥವಾ ಕೊಲೆಯ ನಂತರವೋ? ಎಂಬುದು ದೃಢವಾಗಿಲ್ಲ. ಆದರೆ, ಕೊಲೆ ಮಾಡಿದ ಬಳಿಕ ಶವ ಸಂಭೋಗ ನಡೆಸಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ಲಭ್ಯವಾಗಿದೆ.

ಆರೋಪಿ ಮಹೇಶ್ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಕಾಲಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪತ್ನಿಯನ್ನು ಕೊಲೆಗೈದಿದ್ದ ಆತ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಾಪತ್ತೆ ನಾಟಕವಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹೇಶ್ ಮನೆಯನ್ನು ಶೋಧಿಸಿದಾಗ, ಹತ್ತಿರದ ತೋಟದಲ್ಲೇ ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಮಹಿಳೆಯ ದೇಹವನ್ನು ಪತ್ತೆ ಹಚ್ಚಿದರು. ಅದು ಮಹೇಶ್, ಪತ್ನಿಯದ್ದೇ ಎಂಬುದು ಖಚಿತವಾಯಿತು.

ಇದಾದ ಬಳಿಕ ಮಹೇಶ್ ಮೇಲೆಯೇ ಅನುಮಾನಗೊಂಡ ಪೊಲೀಸರು ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಎಸಗಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೃತದೇಹದ ಮೇಲಿದ್ದ ದ್ರವವು ಆರೋಪಿ ಮಹೇಶನದ್ದೇ ಎಂಬುದನ್ನು ಸಾಬೀತಾಗಿದೆ. ನೆರೆಮನೆಯವನೊಂದಿಗೆ ಪತ್ನಿಗೆ ಅಕ್ರಮ ಸಂಬಂಧವಿತ್ತು. ಆದ್ದರಿಂದ ಈ ಕೃತ್ಯ ಮಾಡಿದೆ ಎಂದು ಹೇಳಿದ್ದಾನೆ. ಅಕ್ರಮ ಸಂಬಂಧ ಬಗ್ಗೆ ನನ್ನ ಸಹೋದರ ಮತ್ತು ನಾನು ಎಚ್ಚ ನೀಡಿದರೂ ಆಕೆ ಅದನ್ನು ಮುಂದುವರಿಸಿದ್ದಳು. ಅಲ್ಲದೆ, ತನ್ನ ಪ್ರಿಯಕರ ನೆರೆಮನೆಯಾತನೊಂದಿಗೆ ಹೋಗುವುದಾಗಿ ಆಕೆ‌ಹೇಳಿದ್ದಳು. ಆದ್ದರಿಂದ ಆಕ್ರೋಶಗೊಂಡ ಮಹೇಶ್ ಈ ಕೃತ್ಯ ಎಸಗಿದ್ದಾನೆ ಎಂದು ಒಪ್ಪಿದ್ದಾನೆ. ಇದೀಗ ಆತ ಪೊಲೀಸ್ ಬಂಧನದಲ್ಲಿದ್ದಾನೆ.
BREAKING NEWS
Loading latest news...
Join our WhatsApp Channel Powered By : Online Pudu