ಸ್ಯಾಂಟ್ರೊ ರವಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು


ಮೈಸೂರು: ಸ್ಯಾಂಟ್ರೊ ರವಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಇದೀಗ ಆತನ ಎರಡನೇ ಪತ್ನಿ ಚೆಕ್ ಬುಕ್ ದುರುಪಯೋಗ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮೈಸೂರಿನ ದೇವರಾಜಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸ್ಯಾಂಟ್ರೋ ರವಿಯ ಎರಡನೇ ಪತ್ನಿ ನೀಡಿರುವ ದೂರಿನನ್ವಯ ಮೈಸೂರಿನ ದೇವರಾಜ ಠಾಣೆಯ ಪೊಲೀಸರು ಐಪಿಸಿ 465, 468, 506, 420 ಹಾಗೂ 34 ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ.

2022ರ ಸೆಪ್ಟೆಂಬರ್ 22ರಂದು ತಾನು ಮೈಸೂರು ದೇವರಾಜ ಮಾರ್ಕೆಟ್ ಗೆ ಹೋಗಿದ್ದ ವೇಳೆ ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ ಬುಕ್ ಇಟ್ಟಿದ್ದೆ. ಈ ವೇಳೆ ಸ್ಯಾಂಟ್ರೊ ರವಿ ಮತ್ತು ಪ್ರಕಾಶ್ ಎಂಬಾತ ಸ್ಕೂಟರ್ ಡಿಕ್ಕಿ ಒಡೆದು ಚೆಕ್ ಬುಕ್ ಕಳವು ಮಾಡಿ ದುರುಪಯೋಗ ಮಾಡಿದ್ದಾರೆ. ತಾನು  ಸಹಿ ಮಾಡಿರುವ ಎರಡು ಚೆಕ್ ಅನ್ನು ಕೆನರಾ ಬ್ಯಾಂಕ್ ಗೆ ಪ್ರೊಡ್ಯೂಸ್ ಮಾಡಿದ್ದಾರೆ. ಇನ್ನೆರಡು ಚೆಕ್ ಅನ್ನು ಹಾಗೆ ಇಟ್ಟುಕೊಂಡಿದ್ದಾರೆ. ಈ ಸಂಬಂಧ ಇದೇ ದೇವರಾಜ ಪೋಲಿಸ್ ಸ್ಟೇಷನ್ ನಲ್ಲಿ ಸೆಪ್ಟೆಂಬರ್ 24 ರಂದು ದೂರು ನೀಡಿದ್ದೆ ಎಂದು ಸ್ಯಾಂಟ್ರೊ ರವಿ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ಯಾಂಟ್ರೊ ರವಿ ಪ್ರಕರಣ ಸಿಐಡಿಗೆ ವರ್ಗಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಿಐಡಿ ಡಿವೈಎಸ್ಪಿ ನೇತೃತ್ವದ ನಾಲ್ವರ ತಂಡ ನಗರಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪೋಲಿಸ್ ತನಿಖಾಧಿಕಾರಿ ಎಸಿಪಿ ಶಿವಶಂಕರ್ ಅವರಿಂದ ದಾಖಲಾತಿ ವಶಕ್ಕೆ ಪಡೆದಿದ್ದಾರೆ. ಸ್ಯಾಂಟ್ರೊ ರವಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಂದು ಮೈಸೂರು ಕೋಟ್‌ರ್ಗೆ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu