ಸಮಾಜವಾದಿ ಪಕ್ಷದ ನಾಯಕನ ಪುತ್ರಿಯೊಂದಿಗೆ ಓಡಿಹೋದ ಬಿಜೆಪಿ ಮುಖಂಡ
Thursday, January 19, 2023
ಉತ್ತರಪ್ರದೇಶ: ಸಮಾಜವಾದಿ ಪಕ್ಷದ ನಾಯಕರೊಬ್ಬರ ಪುತ್ರಿಯೊಂದಿಗೆ ಬಿಜೆಪಿ ಮುಖಂಡನೊಬ್ಬ ಓಡಿಹೋಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೋಗ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಬಿಜೆಪಿಯು ಪಕ್ಷದಿಂದ ಆತನನ್ನು ಉಚ್ಚಾಟಿಸಿದೆ.
ಬಿಜೆಪಿ ನಾಯಕ ಆಶಿಶ್ ಶುಕ್ಲಾ (47), ಸಮಾಜವಾದಿ ಪಕ್ಷದ ನಾಯಕರೊಬ್ಬರ 26 ವರ್ಷದ ಪುತ್ರಿಯೊಂದಿಗೆ ಜೊತೆ ಓಡಿ ಹೋಗಿದ್ದಾನೆ. ಆಶಿಶ್ ಶುಕ್ಲಾಗೆ 21 ವರ್ಷದ ಪುತ್ರ ಹಾಗೂ ಏಳು ವರ್ಷದ ಪುತ್ರಿಯಿದ್ದಾರೆ. ಮೂಲಗಳ ಪ್ರಕಾರ, ಯುವತಿಯ ಮನೆಯವರು ಅಕೆಗೆ ಮದುವೆ ನಿಶ್ಚಯಿಸಿದ್ದರು. ಇದೇ ವೇಳೆ ಇಬ್ಬರೂ ಓಡಿಹೋಗಿದ್ದಾರೆ.
ಬಿಜೆಪಿಯ ಹರ್ದೋಯ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಸುದ್ದಿಗಾರರೊಂದಿಗೆ ಮಾತನಾಡಿ, 'ಆಶಿಶ್ ಶುಕ್ಲಾ ಪಕ್ಷದ ಹರ್ದೋಯ್ ನಗರ ಪ್ರಧಾನ ಕಾರ್ಯದರ್ಶಿಯಾಗಿದ್ದನು. ಪಕ್ಷದ ನೀತಿಗೆ ವಿರುದ್ಧವಾಗಿ ಕೆಲಸ ಮಾಡಿ, ಅನುಚಿತ ವರ್ತಿಸಿದ್ದಾನೆ. ಆದ್ದರಿಂದ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲಾಗಿದೆ. ಮಾತ್ರವಲ್ಲದ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸಹ ರದ್ದುಗೊಳಿಸಲಾಗಿದೆ. ಈಗ ಪಕ್ಷಕ್ಕೂ ಶುಕ್ಲಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆಶಿಶ್ ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಂಪೂರ್ಣ ಸ್ವತಂತ್ರರು' ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.