-->
ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ  - ಸುಸ್ಥಿರ ಅಭಿವೃದ್ಧಿಗೆ ಆರ್ಥಿಕ ಸಾಕ್ಷರತೆ ಅಗತ್ಯ

ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ - ಸುಸ್ಥಿರ ಅಭಿವೃದ್ಧಿಗೆ ಆರ್ಥಿಕ ಸಾಕ್ಷರತೆ ಅಗತ್ಯ

 

 


ವಿದ್ಯಾಗಿರಿ: ಸುಸ್ಥಿರ ಅಭಿವೃದ್ಧಿಗೆ ಆರ್ಥಿಕ ಸಾಕ್ಷರತೆ ಅಗತ್ಯವಾಗಿದ್ದು, ಆರ್ಥಿಕ ಸಾಕ್ಷರತೆಯಲ್ಲಿ ಸ್ವೀಡನ್ ಹಾಗೂ ಡೆನ್ಮಾರ್ಕ್ ಮುಂಚೂಣಿಯಲ್ಲಿವೆೆ ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹೇಳಿದರು. 

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ಎಂಕಾಂ ಎಚ್‌ಆರ್‌ಡಿ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತç ಶಿಕ್ಷಕರ ಸಂಘದ (ಎಂಯುಸಿಟಿಎ) ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ’ ದಲ್ಲಿ ಅವರು ಮಾತನಾಡಿದರು.

ಹಣದ ಜೊತೆ ಒಳ್ಳೆಯ ಸಂಬAಧ ಇರಿಸಿಕೊಳ್ಳಿ. ಹಣ ಗಳಿಸುವ ಆಸೆಯಿದ್ದರೆ, ತಕ್ಕಂತೆ ಶ್ರಮ ಪಡಬೇಕು. ಆರ್ಥಿಕ ವ್ಯವಹಾರಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳವುದರಿಂz ಸಿಗುವ ಲಾಭವು ಅತ್ಯುತ್ತಮವಾಗಿದೆ. ನಿಮ್ಮ ಹಣದ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಎಂದರು. 

ಉಪನ್ಯಾಸ ನೀಡಿದ ಸೆಬಿ ಸಂಸ್ಥೆಯ ನವೀನ್ ರೇಗೊ ಮಾತನಾಡಿ, ಪ್ರಸ್ತುತ  ಷೇರು ಮಾರುಕಟ್ಟೆಯಲ್ಲಿ ಹಣದುಬ್ಬರ ಜಾಸ್ತಿಯಿದೆ. ಕೆಲವೊಮ್ಮೆ ಲಾಭ ಜಾಸ್ತಿ ಅಥವಾ ಕಡಿಮೆ ಇರಬಹುದು. ಹಾಗೆಯೇ ಒಂದಿಷ್ಟು ಹಣವನ್ನು ಹೂಡಿಕೆ ಮಾಡುವುದು ಉತ್ತಮ. ಆದರೆ, ದುಪ್ಪಟ್ಟು ಲಾಭ ದೊರೆಯುತ್ತದೆ ಎಂದು ಮೋಸ ಮಾಡುವವರು ಇದ್ದಾರೆ. ಅಂತಹ ಆಮಿಷಕ್ಕೆ ಸಿಲುಕದೇ ಹಣಕಾಸಿನ ಪರಿಸ್ಥಿತಿಯನ್ನು ನಿಭಾಯಿಸುವುದು ಮುಖ್ಯ. ಯಾವುದೇ ಕೆಲಸವನ್ನು ಸಂಪೂರ್ಣ ಮಾಹಿತಿ ಇಲ್ಲದೆ ಕೈಗೊಳ್ಳಬಾರದು ಎಂದರು. 

‘ಹೂಡಿಕೆ ಪ್ರಾರಂಭ ಯಾವಾಗ?’ ಕುರಿತು ಫ್ರಾಂಕ್ಲಿನ್ ಟೆಂಪ್ಲೆಷನ್ ಇಂಡಿಯಾ ಸಂಸ್ಥೆಯ ಹಿರಿಯ ಶಾಖಾ ವ್ಯವಸ್ಥಾಪಕ ಲಿಯೋ ಅಮಲ್ ಎ ಮತ್ತು ‘ವೈಯಕ್ತಿಕ ಹೂಡಿಕೆ ಯೋಜನೆ’ ಕುರಿತು ಸರ್ವಿಸ್ ಪ್ರೊಫೆಷನಲ್‌ನ ವ್ಯೋನಲ್ ಡಿಸೋಜ ಉಪನ್ಯಾಸ ನೀಡಿದರು. 

ಎಂಕಾಂ ಎಚ್‌ಆರ್‌ಡಿ ವಿಭಾಗದ ಸಂಯೋಜಕಿ ಹಾಗೂ ಕರ‍್ಯಕ್ರಮದ ಸಂಯೋಜಕಿ ಶಾಜಿಯಾ ಕಾನುಮ್ ಮತ್ತು ಸ್ನಾತಕೋತ್ತರ ವಾಣಿಜ್ಯ ಶಾಸ್ತç ವಿಭಾಗದ ಸಂಯೋಜಕಿ ರೇಖಾ ಶೆಟ್ಟಿ ಇದ್ದರು. 

ವಿಧ್ಯಾರ್ಥಿನಿ ವಿದ್ಯಾ ಸ್ವಾಗತಿಸಿದರು. ಸಾನಿಧ್ಯಾ ಪ್ರಾರ್ಥನೆ ಹಾಡಿದರು. ಅಕ್ಷತಾ ವಂದಿಸಿದರು ಮತ್ತು ರಫಿಯಾ, ಅನುಶ್ರೀ ನಿರೂಪಿಸಿದರು. 






Ads on article

Advertise in articles 1

advertising articles 2

Advertise under the article