ಸುರತ್ಕಲ್: ಮಗುವಿನ ಅಪಹರಣಕ್ಕೆ ಯತ್ನ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ


ಸುರತ್ಕಲ್: ರಾತ್ರಿ ವೇಳೆ ಮನೆಯ ಮುಂಭಾಗ ನಿಂತಿದ್ದ ಮಗುವನ್ನು ಅಪಹರಕ್ಕೆತ್ನಿಸಿರು ಆತಂಕಕಾರಿ ಘಟನೆಯೊಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.




ಸೋಮವಾರ ರಾತ್ರಿ 9ಗಂಟೆಯ ಸುಮಾರಿಗೆ ಸುರತ್ಕಲ್‌ನ ಎಲ್ಲಾ ಕಡೆಗಳಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಈ ಸಂದರ್ಭ ಚೊಕ್ಕಬೆಟ್ಟು ಜುಮಾ ಮಸೀದಿಯ ಮುಂಭಾಗದಲ್ಲಿದ್ದ ಮನೆಯ ಮುಂದೆ ಮಗುವೊಂದು ನಿಂತಿತ್ತು. ಈ ವೇಳೆ ಅಲ್ಲಿಗೆ ಬಂದ ನೀಲಿ ಬಣ್ಣದ ಟಿ ಶರ್ಟ್ ಹಾಕಿದ್ದ ದುಷ್ಕರ್ಮಿ ಮಗುವಿನ ಕೈ ಹಿಡಿದು 'ನಿನ್ನ ಅಣ್ಣ ಕಾರಿನಲ್ಲಿದ್ದಾನೆ, ಬಾ' ಎಂದು ಕರೆದೊಯ್ಯಲು ಯತ್ನಿಸಿದ್ದಾನೆ. ಆಗ ಆ ಮಗು ಹೆದರಿ ಅಣ್ಣ ಮನೆಯಲ್ಲಿದ್ದಾನೆಂದು ಆತನಿಂದ ತಪ್ಪಿಸಿ ಮನೆಗೆ ಓಡಿದೆ. ಈ ವೇಳೆ ಶಂಕಿತ ಅಪಹರಣಕಾರ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ದುಷ್ಕರ್ಮಿ ಮಗುವಿನ ಅಪಹರಣ ಮಾಡಲು ನಡೆಸಿರುವ ವಿಫಲ ಯತ್ನ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದ ಸಮೀಪದ ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu