-->
1000938341
ಶಾರುಖ್‌ ಖಾನ್ ರನ್ನು ಸುಟ್ಟುಹಾಕುವ ಬೆದರಿಕೆಯೊಡ್ಡಿದ ಅಯೋಧ್ಯೆಯ ಸ್ವಾಮೀಜಿ

ಶಾರುಖ್‌ ಖಾನ್ ರನ್ನು ಸುಟ್ಟುಹಾಕುವ ಬೆದರಿಕೆಯೊಡ್ಡಿದ ಅಯೋಧ್ಯೆಯ ಸ್ವಾಮೀಜಿ


ಅಯೋಧ್ಯೆ: ಪಠಾಣ್ ಸಿನಿಮಾದ 'ಬೇಷರಮ್ ರಂಗ್...' ಹಾಡು ವಿವಾದವೆದ್ದಿರುವ ಬೆನ್ನಲ್ಲೇ ಅಯೋಧ್ಯೆಯ ಸ್ವಾಮೀಜಿಯೊಬ್ಬರು ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆಯೊಡ್ಡಿದ್ದಾರೆ. 

''ನಟ ಶಾರುಖ್ ಖಾನ್ ನನ್ನ ಕೈಗೆ ಸಿಕ್ಕಲ್ಲಿ ಅವರನ್ನು ಜೀವಂತ ಸುಟ್ಟುಹಾಕುತ್ತೇನೆ,'' ಎಂದು ಹೇಳಿಕೆ ನೀಡಿದ್ದಾರೆ. "ಬೇಷರಮ್ ರಂಗ್..." ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ. ಸನಾತನ ಧರ್ಮದ ಬಗ್ಗೆ ಗೌರವವಿರುವ ಎಲ್ಲರೂ ಇದನ್ನು ನಿರಂತರವಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ನಾವಿಂದು ಪ್ರತಿಭಟನೆಯ ಅಂಗವಾಗಿ ಶಾರುಕ್ ಖಾನ್ ಪೋಸ್ಟರ್ ಸುಟ್ಟಿದ್ದೇವೆ. ಒಂದು ವೇಳೆ ನಾನು ಜಿಹಾದಿ ಶಾರುಖ್‌ ಖಾನ್ ನನ್ನು ಭೇಟಿಯಾದರೆ, ಅವರನ್ನು ಜೀವಂತವಾಗಿ ಸುಟ್ಟುಹಾಕುವೆ,'' ಎಂದು ಅಯೋಧ್ಯೆಯ ಮಹಾಂತ ಪರಮಹಂಸ ಆಚಾರ್ಯ ತಪಸ್ವಿ ಚಾನ್ನಿ ಬೆದರಿಕೆಯೊಡ್ಡಿದ್ದಾರೆ. 

“ಜನರು ಪಠಾಣ್ ಸಿನಿಮಾವನ್ನು ಬಹಿಷ್ಕರಿಸಬೇಕು. ಇಷ್ಟಾಗಿಯೂ ಸಿನಿಮಾ ಬಿಡುಗಡೆಗೆ ಚಿತ್ರಮಂದಿರಗಳು ಮುಂದಾದಲ್ಲಿ ಅವುಗಳಿಗೂ ಬೆಂಕಿ ಹಚ್ಚುತ್ತೇವೆ'' ಎಂದು ಬೆದರಿಕೆಯೊಡ್ಡಿದ್ದಾರೆ. "ಬೇಷರಮ್ ರಂಗ್..." ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು ಭಾರೀ ವಿವಾದ ಕಾರಣವಾಗಿತ್ತು.

Ads on article

Advertise in articles 1

advertising articles 2

Advertise under the article