-->

ಬಾಲಕನನ್ನು ನುಂಗಿದ ಹಿಪ್ಪೋಪೊಟಮಸ್: ಆತ ಬದುಕಿ ಉಳಿದದ್ದೇ ಪವಾಡ

ಬಾಲಕನನ್ನು ನುಂಗಿದ ಹಿಪ್ಪೋಪೊಟಮಸ್: ಆತ ಬದುಕಿ ಉಳಿದದ್ದೇ ಪವಾಡ



ಕಂಪಲಾ: ಕಟ್ಟೆ ಕಬಟೊರೊ ಪಟ್ಟಣದ ಸರೋವರದ ದಡದಲ್ಲಿ ಹಸಿದ ಹಿಪ್ಪೋಪೋಟಮಸ್(ನೀರ್ಗುದುರೆ) 2ವರ್ಷದ ಬಾಲಕನನ್ನು ನುಂಗಿದ ಪ್ರಸಂಗವೊಂದು ನಡೆದಿದೆ. ಈ ರಾಕ್ಷಸ ಹಿಪಪಾಟಮಸ್‌ನಿಂದ ಬಾಲಕನು ಪವಾಡವೆಂಬಂತೆ ಬದುಕುಳಿದು ಬಂದಿದ್ದಾನೆ. 

ಬಾಲಕನನ್ನು ಹಿಪ್ಪೋಪೊಟಮಸ್ ನುಂಗಿರುವುದನ್ನು ಕಂಡು ಅಲ್ಲಿದ್ದವರು ಅದರ ಮೇಲೆ ಕಲ್ಲು ತೂರಾಡಿದ್ದಾರೆ. ಇದರಿಂದ ಹೆದರಿದ ಹಿಪ್ಪೋ ಹುಡುಗನನ್ನು ವಾಪಸ್ ಉಗುಳಿದೆ. ಸಾವಿನ ದವಡೆಯಿಂದ ಪಾರಾದ ಬಾಲಕನ ಹೆಸರು ಇಗಾ ಪಾಲ್ ಎಂದು ಗುರುತಿಸಲಾಗಿದೆ. ಹಿಪ್ಪೋಟಮಸ್ ಬಾಲಕ ತಲೆಯಿಂದ ದೇಹದ ಅರ್ಧ ಭಾಗವನ್ನು ನುಂಗಿತ್ತು. ಪರಿಣಾಮ ಬಾಲಕನ ಕೈಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಬಾಲಕ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ರೇಬೀಸ್ ಲಸಿಕೆಯನ್ನು ಪಡೆದ ಬಳಿಕ ಆತನನ್ನು ಮನೆಗೆ ಕಳುಹಿಸಲಾಯಿತು. ಆದರೂ ಪೋಲಿಸ್ ವಕ್ತಾರರು ಸರೋವರಗಳು ಮತ್ತು ವನ್ಯಜೀವಿ ಕೇಂದ್ರಗಳಂತಹ ಪ್ರಾಣಿಗಳ ಅಭಯಾರಣ್ಯಗಳ ಬಳಿ ಇರುವ ಪೋಷಕರಿಗೆ ತಮ್ಮ ಮೇಲೆ ದಾಳಿ ಮಾಡುವ ಮೊಸಳೆಗಳು ಮತ್ತು ಹಿಪ್ಪೋಗಳಂತಹ ದಾರಿತಪ್ಪಿ ಪ್ರಾಣಿಗಳ ಬಗ್ಗೆ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದರು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article