ಕೆಜಿಎಫ್ ಸಿನಿಮಾದಲ್ಲಿ ತಾತನಾಗಿ ಅಭಿನಯಿಸಿ ‌ಕೃಷ್ಣಾಜಿ ಆರೋಗ್ಯದಲ್ಲಿ ಏರುಪೇರು: ಐಸಿಯುನಲ್ಲಿ ಚಿಕಿತ್ಸೆ


ಬೆಂಗಳೂರು: ಕೆಜಿಎಫ್‌ ಸಿನಿಮಾದಲ್ಲಿ 'ತಾತʼನಾಗಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದ ಕೃಷ್ಣಾಜಿ ರಾವ್ ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ 'ಕೆಜಿಎಫ್‌ʼ ಸಿನಿಮಾದಲ್ಲಿ ತಾತನ ಪಾತ್ರವೊಂದರಲ್ಲಿ ಅಭಿನಯಿಸಿದ್ದ ಕೃಷ್ಣಾಜಿ ರಾವ್‌ ತಮ್ಮ ಸಂಬಂಧಿಕರ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಸದ್ಯ ಅವರು ಬೆಂಗಳೂರಿನ ಸೀತಾ ಸರ್ಕಲ್‌ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ

ಕೃಷ್ಣಾಜಿ ಅವರಿಗೆ ಶ್ವಾಸಕೋಶದ ಸೋಂಕು ಉಂಟಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಕೃತಕ ಉಸಿರಾಟ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಜಿಎಫ್ ಸಿನಿಮಾದ ಬಳಿಕ ಹಲವರು ಸಿನಿಮಾಗಳಲ್ಲಿ ಕೃಷ್ಣಾಜಿ ರಾವ್‌ ನಟಿಸಿದ್ದಾರೆ. ಇತ್ತೀಚೆಗೆ ಸೆಟ್ಟೇರಿದ್ದ ‘ನ್ಯಾನೊ ನಾರಾಯಣಪ್ಪ’ ಎಂಬ ಸಿನಿಮಾಕ್ಕೆ ಕೃಷ್ಣಾಜಿ ಅವರೇ ನಾಯಕರಾಗಿದ್ದಾರೆ.