ಮಂಗಳೂರು: ಅನ್ಯಕೋಮಿನ ಜೋಡಿಯ ಬೈಕ್ ಓಡಾಟ; ಜ್ಯುವೆಲ್ಲರಿ ಶಾಪ್ ನೊಳಗಡೆಯೇ ನಡೆಯಿತು ನೈತಿಕ ಪೊಲೀಸ್ ಗಿರಿ

ಮಂಗಳೂರು: ನಗರದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದೆ. ಜ್ಯುವೆಲ್ಲರಿ ಶಾಪ್ ನೊಳಗಡೆಯೇ ನುಗ್ಗಿ ಬಜರಂಗದಳದ ಕಾರ್ಯಕರ್ತರು ಪೊಲೀಸರ ಎದರುಗಡೆಯೇ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಅನ್ಯಕೋಮಿನ ಯುವಕ ಲವ್ ಜಿಹಾದ್ ಮಾಡುತ್ತಿದ್ದಾನೆಂದು ಆರೋಪಿಸಿ ನಗರದ ಕಂಕನಾಡಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಬಜರಂಗದಳದ ಕಾರ್ಯಕರ್ತರು ಥಳಿಸಿದ್ದಾರೆ. ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಶೃಂಗೇರಿ ಮೂಲದ ಹಿಂದೂ ಯುವತಿ ಮತ್ತು ಮಂಗಳೂರಿನ ಮುಸ್ಲಿಂ ಯುವಕ ಕೆಲಸ ಮಾಡುತ್ತಿದ್ದರು‌. ಇವರು ಸದಾ ಬೈಕ್ ನಲ್ಲಿ ಓಡಾಡುತ್ತಿರುವುದ್ದನ್ನು ಬಜರಂಗದಳ ಸಂಘಟನೆಯ ಯುವಕರು ದಾಳಿ ನಡೆಸಿದ್ದಾರೆ.

ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ತಿರುಗುವುದನ್ನು ಬಜರಂಗದಳದ ಕಾರ್ಯಕರ್ತರು ಆಕೆಯ ಪೋಷಕರ ಗಮನಕ್ಕೆ ತಂದಿದ್ದಾರೆ. ಪೊಲೀಸರೊಂದಿಗೆ ಆಗಮಿಸಿದ್ದ ಬಜರಂಗದಳದ ಕಾರ್ಯಕರ್ತರು‌ ಯುವಕನಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಯುವತಿಗೂ ಆಕೆಯ ಪೋಷಕರು ಥಳಿಸಿದ್ದಾರೆ‌ ಎಂದು ತಿಳಿದುಬಂದಿದೆ. ‌

'ಲವ್ ಜಿಹಾದ್ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ, ಲವ್ ಜಿಹಾದ್ ನಿಲ್ಲಿಸದೇ ಇದ್ದರೆ ನಿಮಗೆ ಮಯ್ಯತ್(ಮರಣ) ಶತಸಿದ್ಧ' ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ಪೋಸ್ಟ್ ಮಾಡಿದ್ದ  ಬಜರಂಗದಳ ಮಂಗಳೂರು ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಕೂಡ ಈ ಘಟನೆಯ ವೇಳೆ ಹಾಜರಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu