ಐಷಾರಾಮಿ ಜೀವನ ನಡೆಸಲು‌ ನೀಚಮಟ್ಟಕ್ಕಿಳಿದ ಯುವತಿ, ಆಕೆಯ ಸ್ನೇಹಿತ ಅರೆಸ್ಟ್

ರಂಗಾರೆಡ್ಡಿ: ಐಷಾರಾಮಿ ಜೀವನ ನಡೆಸಲು ಮನೆಯಲ್ಲಿಯೇ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ತೆಲಂಗಾಣದ ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ತಿಳಿಸಿದ್ದಾರೆ. 

ವಿಶಾಖಪಟ್ಟಣದ ಗಂಧಾ ಭವಾನಿ (25) ಹಾಗೂ ಆಕೆಯ ಸ್ನೇಹಿತ ಅಣ್ಣಾವರಂನ ಕಾಸಿರೆಡ್ಡಿ ದೊರಬಾಬು (23) ಬಂಧಿತ ಆರೋಪಿಗಳು.

ಆರೋಪಿಗಳು ತೆಲಂಗಾಣದ ಮೀರಪೇಟೆಯ ಟಿಕೆಆರ್ ಕಾಲೇಜು ಬಳಿಯಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಲು ಹಾಗೂ ಐಷಾರಾಮಿ ಜೀವನ ನಡೆಸಲು ಈ ದಂಧೆಗೆ ಇಳಿದಿದ್ದರು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿಯ ಮೇರೆಗೆ ಮೀರಪೇಟೆ ಠಾಣಾ ಪೊಲೀಸರು ದಾಳಿ ನಡೆಸಿ, ಭವಾನಿ ಮತ್ತು ಆಕೆಯ ಸ್ನೇಹಿತ ದೊರಬಾಬುವನ್ನು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಆರೋಪಿಗಳಿಬ್ಬರ ವಿರುದ್ಧ ಪಿಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಮೀರಪೇಟೆ ಪೊಲೀಸರು ಇಬ್ಬರು ಜೈಲಿಗೆ ಕಳುಹಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu