ಯುವತಿಗೆ ಸ್ಕೇಲ್ ನಿಂದ ಹೊಡೆದ ಬಾಸ್ ಕಳೆದುಕೊಂಡದ್ದು 90 ಲಕ್ಷ ರೂ.: ಅಷ್ಟಕ್ಕೂ ಈ ದಂಡ ಏಕೆ ಗೊತ್ತೇ?


ನವದೆಹಲಿ: ಮಾಡಿರುವ ಏನೇನೋ ತಪ್ಪಿಗೆ ದಂಡ ತೆರಬೇಕಾಗುತ್ತದೆ. ಆದರೆ ಇಲ್ಲೊಬ್ಬ ತಾನು ಮಾಡಿದ ಒಂದು ತಪ್ಪಿಗೆ ಬರೋಬ್ಬರಿ 90 ಲಕ್ಷ ರೂ. ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ಆತ ಮಾಡಿರುವ ತಪ್ಪೇನು ಗೊತ್ತೇ..? ಅದಕ್ಕೆ ಈ ಸುದ್ದಿ ನೋಡಿ

ಐರ್ಲೆಂಡ್‌ನ ಕಂಪನಿಯೊಂದರ ಮಹಿಳಾ ಉದ್ಯೋಗಿ ತನ್ನ ಬಾಸ್ ವಿರುದ್ಧವೇ ಆರೋಪ ಹೊರಿಸಿ, ದಂಡ ತೆರುವಂತೆ ಮಾಡಿದ್ದಾಳೆ. ಕಚೇರಿಯಲ್ಲಿ ಬಾಸ್ ನನ್ನ ನಿತಂಬಕ್ಕೆ ಸೈಲ್‌ನಿಂದ ಹೊಡೆದಿದ್ದಾನೆ. ಪರಿಣಾಮ ನನಗೆ ತೀವ್ರವಾದ ಮುಜುಗರವಾಗಿದೆ. ಮಾತ್ರವಲ್ಲ ಲೈಂಗಿಕವಾಗಿ ಕಿರುಕುಳಕ್ಕೆ ಒಳಗಾದಂತಾಗಿದೆ ಎಂದು ಆಕೆ ಆರೋಪಿಸಿದ್ದಾಳೆ.

ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರಿದರೆ, ತನ್ನ ಉಡುಗೆ ಹಾಗೂ ವರ್ತನೆಯೇ ಪ್ರಚೋದಕ ಎಂಬ ಆರೋಪ ಹೊರಿಸಲಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಬಳಿಕ ಈಕೆ ಈ ವಿಚಾರವನ್ನು ನಾರ್ಥನ್ ಐರ್ಲೆಂಡ್ ಇಕ್ವಾಲಿಟಿ ಕಮಿಷನ್ ಮುಂದೆ ಕೊಂಡೊಯ್ದಿದ್ದಾಳೆ. ಅಲ್ಲಿ ಆಕೆಗೆ ಪರಿಹಾರವಾಗಿ 90 ಲಕ್ಷ ರೂ. ನೀಡುವಂತೆ ಬಾಸ್‌ಗೆ ಕಮಿಷನ್ ಸೂಚಿಸಿದ್ದನ್ನು ಅಲ್ಲಿನ ಮಾಧ್ಯಮ ವರದಿ ಮಾಡಿದೆ. 
BREAKING NEWS
Loading latest news...
Join our WhatsApp Channel Powered By : Online Pudu