-->

ದುಬೈನಲ್ಲಿ 33 ಕೋಟಿ ರೂ. ಜಾಕ್ ಪಾಟ್ ಗೆದ್ದ ಭಾರತದ ಮೂಲದ ವಾಹನ ಚಾಲಕ

ದುಬೈನಲ್ಲಿ 33 ಕೋಟಿ ರೂ. ಜಾಕ್ ಪಾಟ್ ಗೆದ್ದ ಭಾರತದ ಮೂಲದ ವಾಹನ ಚಾಲಕ

ದುಬೈ: ಅದೃಷ್ಟ ದೇವತೆ ಹೀಗೆ, ಯಾರಿಗೆ ಯಾವಾಗ ಬೇಕಾದರೂ ಒಲಿಯಬಹುದು. ಹೀಗೆ ವ್ಯಕ್ತಿಯೋರ್ವನ ಜೀವನ ರಾತ್ರೋರಾತ್ರಿ ಬದಲಾಗಬಹುದು. ಹೀಗೆ ವಿದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ದ.ಕ.ಜಿಲ್ಲೆಯ ಮೂಲದ ವ್ಯಕ್ತಿಯೋರ್ವರ ಬದುಕಿನಲ್ಲಿ ಇಂಥದ್ದೇ ದೊಡ್ಡ ಬದಲಾವಣೆಯಾಗಿದೆ.

ಅಜಯ್ ಒಗುಲಾ ಮೂಲತಃ ದಕ್ಷಿಣ ಭಾರತದವರು. ಕಳೆದ ಕೆಲ ವರ್ಷಗಳಿಂದ ಅವರು ದುಬೈಯ ಚಿನ್ನದಂಗಡಿಯೊಂದರಲ್ಲಿ ಚಾಲಕನಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಅಜಯ್‌ ಒಗುಲಾ ಅವರು ಎಮಿರೇಟ್ಸ್ ಡ್ರಾ ಟಿಕೆಟ್ ಕೊಂಡುಕೊಂಡಿದ್ದಾರೆ. ಆದರೆ ಅವರು ಖರೀದಿಸಿರುವ ಮೊದಲ ಟಿಕೆಟ್‌ ನಲ್ಲೇ ದೊಡ್ಡಮಟ್ಟದ ಮೊತ್ತವೇ ಒಲಿದು ಬಂದಿದೆ.


ಅಜಯ್‌ ಹಿಂದೆಂದೂ ಲಾಟರಿ ಟಿಕೆಟ್‌ ಖರೀಸಿದಿಸಿದವರಲ್ಲ. ಎಮಿರೇಟ್ಸ್ ಟಿಕೆಟ್‌ ಡ್ರಾ ಆದ ಬಳಿಕ ತಾವು ಬಹುಮಾನ ಗೆದ್ದಿರುವುದು ಅವರಿಗೆ ತಿಳಿದು ಬಂದಿದೆ. ತಾವು ಸಣ್ಣ ಮೊತ್ತ ಗೆದ್ದಿರಬಹುದು ಎಂದುಕೊಂಡ ಅಜಯ್‌ ಅವರಿಗೆ ತಾನು 33 ಕೋಟಿ ರೂ. ಗೆದ್ದಿರೋದು ಕಂಡು ಸಂತಸಕ್ಕೆ ಪಾರವೇ ಇಲ್ಲವಂತೆ. ಅಲ್ಲದೆ ಅವರಿಗಿನ್ನೂ ತಾವು  ಜಾಕ್ ಪಾಟ್‌ ಗೆದ್ದಿದ್ದೇನೆ ಎನ್ನುವುದನ್ನು ನಂಬೋಕೆ ಸಾಧ್ಯನೇ ಆಗುತ್ತಿಲ್ಲ ಎನ್ನುತ್ತಿದ್ದಾರೆ.

33 ಕೋಟಿ.ರೂ ಲಾಟರಿ ಗೆದ್ದ ಬಳಿಕ ಅಜಯ್‌ ತಾವೊಂದು ಸ್ವಂತ ಮನೆ ಕಟ್ಟಬೇಕು ಅಂದುಕೊಂಡಿದ್ದಾರೆ. ಹಾಗೆಯೇ ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಆರಂಭಿಸುವ ಯೋಜನೆಯನ್ನು ಹೊಂದಿದ್ದಾರೆ. ಇದರೊಂದಿಗೆ ಅಗತ್ಯ ಹಾಗೂ ಬಡ ಕುಟುಂಬಕ್ಕೆ ಒಂದಷ್ಟು ಸಹಾಯ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article