-->
"ಬಿರ್ದ್ ದ ಕಂಬುಲ"  2023 ಎಪ್ರಿಲ್ ನಲ್ಲಿ ತೆರೆಗೆ- ಕನ್ನಡ, ಮಲಯಾಲಂ, ಹಿಂದಿಯಲ್ಲೂ ಬರಲಿದೆ -ಎಸ್.ವಿ. ರಾಜೇಂದ್ರ ಸಿಂಗ್ ಬಾಬು

"ಬಿರ್ದ್ ದ ಕಂಬುಲ" 2023 ಎಪ್ರಿಲ್ ನಲ್ಲಿ ತೆರೆಗೆ- ಕನ್ನಡ, ಮಲಯಾಲಂ, ಹಿಂದಿಯಲ್ಲೂ ಬರಲಿದೆ -ಎಸ್.ವಿ. ರಾಜೇಂದ್ರ ಸಿಂಗ್ ಬಾಬು

 


 


ಮಂಗಳೂರು: "ಬಿರ್ದ್ ಕಂಬುಲ" ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ.  ಈ ಚಿತ್ರವು 2023 ಎಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದರು.

 

ಮಂಗಳೂರಿನಲ್ಲಿ ಮಾತನಾಡಿದ ಅವರು ತುಳುನಾಡಿನ ಹಲವಾರು ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಯಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್, ರವಿಶಂಕರ್ ನಟಿಸಿದ್ದಾರೆ. ಚಿತ್ರ ನಿರ್ದೇಶಕನಾಗಿ ಇದು ತುಂಬಾ ಚಾಲೆಂಜ್ ಆಗಿರೋ ಸಿನಿಮಾ. ನಿರ್ಮಾಪಕ ಅರುಣ್ ರೈ ತೊಡಾರ್, ರಾಜೇಶ್ ಕುಡ್ಲ, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇರೋದ್ರಿಂದ ತುಳು ಭಾಷೆ ಗೊತ್ತಿಲ್ದೆ ಇದ್ರೂ ಸುಲಭವಾಗಿ ಚಿತ್ರೀಕರಣ ನಡೆಸುವಂತಾಯಿತು. ಇದು ಕಂಬಳ ಕತೆಯಾದ ಕಾರಣ ಪ್ರಾಣಿಗಳ ಜೊತೆ ಚಿತ್ರೀಕರಣ ನಡೆಸಲಾಗಿದೆ. ಇದು ಸುಲಭದ ಮಾತಲ್ಲ. ಕೆಮರಾ, ತಾಂತ್ರಿಕತೆ ಹಿನ್ನೆಲೆಯಲ್ಲಿ ಬಿರ್ದ್ ಕಂಬುಲ ತುಳು ಭಾಷೆ ಮಾತ್ರವಲ್ಲದೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರ ಬೇರೆ ಚಿತ್ರಗಳಿಗಿಂತ ಭಿನ್ನವಾಗಿದೆ. ಎಲ್ಲಾ ದೃಶ್ಯಗಳು ನೈಜತೆಯಿಂದ ಕೂಡಿದ್ದು ಸಾಧ್ಯವಾದಷ್ಟು ಸಹಜವಾಗಿ ಚಿತ್ರವನ್ನು ನಿರ್ಮಿಸಲಾಗಿದೆ. ತುಳುನಾಡಿನ ಭಾಷೆ, ಸಂಸ್ಕೃತಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ತುಳು ಭಾಷೆ, ಇಲ್ಲಿನ ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಲಿದೆ"  ಎಂದರು.

 

ಬಳಿಕ ಮಾತಾಡಿದ ಚಿತ್ರದ ಸಂಭಾಷಣೆಕಾರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, " ಚಿತ್ರದ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ತುಳು ಭಾಷೆಗೆ ಒಂದು ಹೊಸ ಆಯಾಮವನ್ನು ತಂದುಕೊಡಲಿದ್ದಾರೆ. ತುಂಬಾ ಭಿನ್ನವಾದ ಸಿನಿಮಾ ಎಲ್ಲರೂ ಪ್ರೋತ್ಸಾಹಿಸಿ" ಎಂದರು.

ಮಾತು ಮುಂದುವರಿಸಿದ ಕುಸೇಲ್ದರಸೆ ನವೀನ್ ಡಿ. ಪಡೀಲ್ ಅವರು, "ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನನ್ನ ಪಾತ್ರ ಕೂಡಾ ಡಿಫರೆಂಟ್ ಆಗಿದೆ. ನಮ್ಮ ತುಳುನಾಡಿನ ಜಾನಪದ ಸೊಗಡನ್ನು ವಿಶ್ವದೆಲ್ಲೆಡೆ ಪಸರಿಸಲಿದೆ. ಕಂಬಳ ಬರೀ ನಮ್ಮ ಸಂಸ್ಕೃತಿ ಮಾತ್ರವಲ್ಲ ಅದು ನಮ್ಮ ಬದುಕು" ಎಂದರು.

ಸ್ವರಾಜ್ ಶೆಟ್ಟಿ ಮಾತಾಡುತ್ತಾ, "ಕಂಬಳ ಎನ್ನುವ ತುಳುನಾಡಿನ ಸಂಸ್ಕೃತಿ ಕುರಿತ ಸಿನಿಮಾ ಇದಾಗಿದೆ. ನನ್ನ ಪಾತ್ರ ಸಾಕಷ್ಟು ವಿಭಿನ್ನವಾಗಿದೆ. ಇಷ್ಟಪಟ್ಟು ನಟಿಸಿದ್ದೇನೆ, ತುಳುವರು ಪ್ರೀತಿಯಿಂದ ಬರಮಾಡಿಕೊಳ್ಳಿ" ಎಂದರು.

ರಾಜೇಶ್ ಕುಡ್ಲ,  ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಲಾ ನಿರ್ದೇಶಕ ಚಂದ್ರಶೇಖರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.


Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article