2023ರಲ್ಲಿ ಶನಿ ಕಾಟ ಇರುವ 3 ರಾಶಿಗಳು ಯಾವುವು ಎಂಬುದು ಇಲ್ಲಿದೆ ನೋಡಿ!!



 ಶನಿಯ ಸಮಸ್ಯೆ ಆರಂಭವಾದರೆ ಒಟ್ಟಾರೆಯಾಗಿ ಸುಮಾರು 7 ವರ್ಷಗಳ ಕಾಲ ನಿಮ್ಮನ್ನ ಕಾಡುತ್ತದೆ. ಆದರೆ ಒಟ್ಟಿಗೆ 7 ವರ್ಷಗಳ ಕಾಲ ಕಾಡುವುದಿಲ್ಲ. 


ಇನ್ನು ಶನಿದೇವ ಹೊಸವರ್ಷದ ಮೊದಲ ತಿಂಗಳು ಜನವರಿಯಂದು ಕುಂಭರಾಶಿಯನ್ನು ಪ್ರವೇಶ ಮಾಡುವುದರಿಂದ ಧನಸ್ಸು ರಾಶಿಯವರಿಗೆ ಶನಿಯ ಕಾಟದಿಂದ ಮುಕ್ತಿ ಸಿಗುತ್ತದೆ ಆದರೆ ಇದರ ಪ್ರಭಾವ ಇನ್ನೂ ಮೂರು ರಾಶಿಗಳ ಮೇಲೆ ಬೀರುತ್ತದೆ.

ಮಕರ ರಾಶಿಯವರ ಎರಡನೇ ಮನೆಯಲ್ಲಿ ಶನಿಯ ಸಂಚಾರವಿದ್ದು, ಸಾಡೇ ಸಾತಿಯ ಎರಡನೇ ಹಂತ ಮುಗಿದು, ಮೂರನೇ ಹಂತ ಆರಂಭವಾಗುತ್ತದೆ. ಇದು ಕೊನೆಯ ಹಂತವಾಗಿದ್ದು, ಈ ಸಮಯದಲ್ಲಿ ಮಿಶ್ರ ಫಲಿತಾಂಶ ಸಿಗಲಿದೆ ಎನ್ನಲಾಗುತ್ತಿದೆ.

ಕುಂಭ ರಾಶಿಯವರಿಗೆ ಸಾಡೇ ಸಾತಿಯ ಮೊದಲ ಹಂತ ಮುಗಿದು ಎರಡನೇ ಹಂತ ಆರಂಭವಾಗುತ್ತದೆ. ಸ್ವಲ್ಪ ಅಡೆ -ತಡೆಗಳು ಈ ಸಮಯದಲ್ಲಿ ಸಾಮಾನ್ಯ ಎನ್ನಬಹುದು. ಯಾವುದೇ ಕೆಲಸವನ್ನು ಹೆಚ್ಚು ಪ್ರತಿಫಲ ಇಟ್ಟುಕೊಳ್ಳದೇ ಮಾಡುವುದು ಉತ್ತಮ.

ಮೀನ ರಾಶಿಯವರಿಗೆ ಸಾಡೇ ಸಾತಿಯ ಮೊದಲ ಹಂತ ಆರಂಭವಾಗುತ್ತದೆ. ಈ ಸಮಯದಲ್ಲಿ ಸಮಸ್ಯೆಗಳು ಬಹಳ ಹೆಚ್ಚು. ಆರೋಗ್ಯ ತೊಂದರೆಗಳು, ಹಣಕಾಸು ವಿಚಾರದಲ್ಲಿ ಸಮಸ್ಯೆ ಹೀಗೆ ಒಂದೆಲ್ಲಾ ಒಂದು ಸಮಸ್ಯೆ ಕಾಡುತ್ತದೆ.

BREAKING NEWS
Loading latest news...
Join our WhatsApp Channel Powered By : Online Pudu