20ರ ಯುವತಿಯನ್ನು ಸ್ಕ್ರೂಡ್ರೈವರ್ ನಲ್ಲಿ 51ಬಾರಿ ಚುಚ್ಚಿ ಕೊಲೆಗೈದ ಕಿರಾತಕ


ಛತ್ತೀಸ್‌ಗಢ: 20ರ ಯುವತಿಗೆ ವ್ಯಕ್ತಿಯೋರ್ವನು 51 ಬಾರಿ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಅಮಾನುಷವಾಗಿ ಕೊಲೆಗೈದಿರುವ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.

ಕೂರ್ಬಾ ಜಿಲ್ಲೆಯ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಪಂಪ್ ಹೌಸ್ ಕಾಲನಿಯಲ್ಲಿ ಡಿಸೆಂಬರ್ 24 ರಂದು ಈ ಘಟನೆ ನಡೆದಿದೆ. ಆರೋಪಿಯು ಸಂತ್ರಸ್ತೆಯ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಮನೆಗೆ ಪ್ರವೇಶಿಸಿ ಕೃತ್ಯ ಎಸಗಿದ್ದಾನೆ. ಅಲ್ಲದೆ ಯಾರಿಗೂ ಕಿರುಚಾಟದ ಸದ್ದು ಕೇಳಿಸಬಾರದೆಂದು ಕಿರಾತಕ ಕೊಲೆಗಾರ ಆಕೆಯ ಬಾಯಿಯನ್ನು ದಿಂಬಿನಿಂದ ಒತ್ತಿ ಹಿಡಿದಿದ್ದಾನೆ ಎನ್ನಲಾಗಿದೆ. ಬಳಿಕ ಮನೆಗೆ ಬಂದ ಸಂತ್ರಸ್ತೆಯ ಸಹೋದರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹೋದರಿಯನ್ನು ನೋಡಿದ್ದ ವೇಳೆ ಈ ಪ್ರಕರಣ ಬಯಲಿಗೆ ಬಂದಿದೆ‌.

ಇಲ್ಲಿನ ಜಶ್ರು‌ ಜಿಲ್ಲೆಯ ಆರೋಪಿ, ಮೂರು ವರ್ಷಗಳ ಹಿಂದೆ ಪ್ರಯಾಣಿಕ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಆಗ ಹತ್ಯೆಯಾದ ಯುವತಿ ಆತನಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಕೋರ್ಬಾ ಜಿಲ್ಲೆ) ವಿಶ್ವದೀಪಕ್ ತ್ರಿಪಾಠಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಇನ್ನೂ ನಡೆಯುತ್ತಿದ್ದು ಕೊಲೆಯ ಹಿಂದಿನ ಉದ್ದೇಶ ಏನು ಎಂಬಬುವುದು ಇನ್ನಷ್ಟೇ ತಿಳಿದು ಬರಬೇಕಿದೆ.
BREAKING NEWS
Loading latest news...
Join our WhatsApp Channel Powered By : Online Pudu