2 ವರ್ಷದ ಮಗು ನುಂಗಿದ್ದ ಬ್ಯಾಟರಿಯನ್ನು 20 ನಿಮಿಷದಲ್ಲಿ ಹೊರ ತೆಗೆದ ಕೇರಳದ ವೈದ್ಯರು...!


ತಿರುವನಂತಪುರಂ: ಎರಡು ವರ್ಷದ ಹಸುಗೂಸು ಆಟವಾಡುತ್ತಾ ಬ್ಯಾಟರಿ ನುಂಗಿದ ಕೇವಲ 20 ನಿಮಿಷದಲ್ಲಿ ವೈದ್ಯರು ಮಗುವನ್ನು ಸಾವಿನ ದವಡೆಯಿಂದ ಪಾರು ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. 

ಟಿವಿ ರಿಮೋಟ್‌ನಲ್ಲಿ ಬಳಸಲಾಗಿದ್ದ 5ಸೆಂ.ಮೀ. ಉದ್ದ ಮತ್ತು 1.5ಸೆಂ.ಮೀ. ಅಗಲದ ಬ್ಯಾಟರಿಯನ್ನು ಮಗು ಆಟವಾಡುತ್ತಾ ನುಂಗಿದೆ. ತಕ್ಷಣ ಪೋಷಕರು ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿನ ವೈದ್ಯರು ತಪಾಸಣೆ ಮಾಡಿ ಮಗುವನ್ನು ನಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಿದ್ದಾರೆ. ಅಲ್ಲಿ ಆಪರೇಷನ್ ನಡೆಸಿದ ವೈದ್ಯರು ಮಗುವಿನ ಪ್ರಾಣ ಉಳಿಸಿದ್ದಾರೆ.

ಕೇರಳದ ರಾಜಧಾನಿ ತಿರುವನಂತಪುರಂ ಹೊರವಲಯದಲ್ಲಿರುವ ನಿಮ್ಸ್ ಆಸ್ಪತ್ರೆಯ ಗ್ಯಾಸ್ಟೋಎಂಟರಾಲಜಿಸ್ಟ್ ಜಯಕುಮಾರ್, ಎಂಡೋಸ್ಕೋಪಿ ಮೂಲಕ ಹೊಟ್ಟೆಯಿಂದ ಬ್ಯಾಟರಿಯನ್ನು ತೆಗೆದು ಹಾಕಿದ್ದಾರೆ. ಬಳಿಕ ಮಾತನಾಡಿದ ವೈದ್ಯರು, 'ಮಗು ರಿಷಿಕೇಶ್‌ನನ್ನು ಪೋಷಕರು ಆಸ್ಪತ್ರೆಗೆ ಕರೆತಂದಿದ್ದಾರೆ. ವಿಷಯ ತಿಳಿದ ತಕ್ಷಣ ನಾವು ಆಪರೇಷನ್ ಥಿಯೇಟರ್‌ಗೆ ಮಗುವನ್ನು ಕರೆದುಕೊಂಡು ಹೋಗಿ ಅರಿವಳಿಕೆ ನೀಡಿದ್ದೇವೆ. ಸುಮಾರು 20 ನಿಮಿಷಗಳಲ್ಲಿ ಬ್ಯಾಟರಿ ತೆಗೆಯಲಾಯಿತು. ಈ ಬ್ಯಾಟರಿ ಅಪ್ಪಿತಪ್ಪಿ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದರೂ ಮಗುವಿನ ಪ್ರಾಣಕ್ಕೆ ಅಪಾಯವಿತ್ತು' ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu