ಹೇರ್ ವಾಶ್ ಮಾಡಲು ಹೋಗಿದ್ದೆ ತಪ್ಪಾಯ್ತಾ? ಹೇರ್ ಸ್ಪಾನಲ್ಲಿ ಸ್ಟ್ರೋಕ್ ಗೆ ತುತ್ತಾದ ಮಹಿಳೆ...!!


 ಹೈದ್ರಾಬಾದ್‌ನಲ್ಲಿ 50 ವರ್ಷದ ಮಹಿಳೆಯೊಬ್ಬರಿಗೆ ಸ್ಟ್ರೋಕ್ ಪರಿಣಮಿಸಿದೆ. ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಇದನ್ನು  "ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್" ಎಂದು ಕರೆಯುತ್ತಾರೆ

ಮಸಾಜ್ ಮಾಡುವವರು ಕುತ್ತಿಗೆ ಮತ್ತು ತಲೆಯನ್ನು ಗಟ್ಟಿಯಾಗಿ ಒತ್ತಿದಾಗ, ಕೆಲವೊಮ್ಮೆ ಕುತ್ತಿಗೆಯನ್ನು ತಿರುಚಿದಾಗ ಈ ರೀತಿ ಸಮಸ್ಯೆಯಾಗುತ್ತದೆ.

ಕೂದಲನ್ನು ವಾಶ್‌ ಮಾಡುವ ಸಂದರ್ಭದಲ್ಲಿ ಮಹಿಳೆಗೆ ಸ್ಟ್ರೋಕ್‌ ಹೊಡೆದಿದೆ. ಕೂದಲು ತೊಳೆಯಲು ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿದಾಗ ಮೆದುಳಿಗೆ ರಕ್ತವನ್ನು ಪೂರೈಸುವ ಪ್ರಮುಖ ಜಾಗ ಒತ್ತಲ್ಪಟ್ಟಿದೆ. ಇದರಿಂದಾಗಿಯೇ ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾಳೆ.





BREAKING NEWS
Loading latest news...
Join our WhatsApp Channel Powered By : Online Pudu