-->
ವಿಮಾನದಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ವೈದ್ಯರೊಂದಿಗೆ ನೆರವಾದ ಮಂಗಳೂರು ಮೂಲದ ಗಗನಸಖಿ

ವಿಮಾನದಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ವೈದ್ಯರೊಂದಿಗೆ ನೆರವಾದ ಮಂಗಳೂರು ಮೂಲದ ಗಗನಸಖಿ


ಮಂಗಳೂರು: ಲಂಡನ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವಿಮಾನದಲ್ಲಿ ಹೃದಯಾಘಾತಕ್ಕೊಳಗಾಗಿರುವ ವ್ಯಕ್ತಿಯ ಪ್ರಾಣ ರಕ್ಷಣೆಗೆ ಮುಂದಾದ ವೈದ್ಯರಿಗೆ ಮಂಗಳೂರು ಮೂಲದ ಗಗನಸಖಿಯೂ ನೆರವಾಗಿ ಗಮನ ಸೆಳೆದಿದ್ದಾರೆ.

ಈ ಘಟನೆಯ ಬಗ್ಗೆ ವೈದ್ಯ, ಮೂಲತಃ ಬೆಂಗಳೂರಿನವರಾದ ಲಂಡನ್‌ನಲ್ಲಿ ವೃತ್ತಿ ನಿಋವಹಿಸುತ್ತಿರುವ ಡಾ.ವಿಶ್ವರಾಜ್‌ ವೇಮಲ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನ.12ರಂದು ಲಂಡನ್ ನಿಂದ ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದೆ. ಈ ವೇಳೆ 43 ವರ್ಷದ ವ್ಯಕ್ತಿಯೊಬ್ಬರಿಗೆ ಹಠಾತ್ತಾಗಿ ಹೃದಯಾಘಾತವಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಏನು ಮಾಡುವುದೆಂದು ಚಿಂತಿಸುತ್ತಿದ್ದಾಗ, ತನ್ನಲ್ಲಿರುವ ಆಟೋಮೇಟೆಡ್‌ ಎಕ್ಸ್‌ಟರ್ನಲ್‌ ಡಿಫಿಬ್ರಿಲೇಟರ್‌ (ಎಇಡಿ) ನೆರವಾಯಿತು.

ಈ ವೇಳೆ ಗಗನಸಖಿಯರಾದ ಮಲ್ಲಿಶಾ ಹಾಗೂ ಮಂಗಳೂರು ನಗರದ ಗಿರಿಥಾ ನೆರವಾಗಿದ್ದಾರೆ. ಅಂತಿಮವಾಗಿ ವಿಮಾನವನ್ನು ಮುಂಬಯಿಯಲ್ಲಿ ಇಳಿಸಿ ತುರ್ತು ನಿಗಾ ಘಟಕಕ್ಕೆ ಹಸ್ತಾಂತರಿಸಲಾಯಿತು. ಈ ವೇಳೆ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಡಾ. ವಿಶ್ವರಾಜ್‌ ಬರೆದುಕೊಂಡಿದ್ದಾರೆ.


Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article