
ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ಜಲಸಮಾಧಿ
Tuesday, November 15, 2022
ಕಚ್: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ಜಲಸಮಾಧಿಯಾದ ಹೃದಯ ವಿದ್ರಾವಕ ಘಟನೆ ಕಚ್‌ನ ನರ್ಮದಾ ನಾಲೆಯಲ್ಲಿ ಸಂಭವಿಸಿದೆ ಎಂದು ಎಸ್ಪಿ ಸೌರಭ್ ಸಿಂಗ್ ಹೇಳಿದ್ದಾರೆ.
ಎಲ್ಲರ ಮೃತದೇಹಗಳನ್ನು ಕಾರ್ಯಾಚರಣೆ ನಡೆಸಿ ನಾಲೆಯಿಂದ ಮೇಲಕ್ಕೆತ್ತಲಾಗಿದೆ. ನೀರು ತೆಗೆಯಲೆಂದು ಕಾಲುವೆಗೆ ಬಗ್ಗಿದ ಮಹಿಳೆ ಮೊದಲು ನೀರು ಪಾಲಾಗಿದ್ದಾಳೆ. ಆಕೆಯನ್ನು ರಕ್ಷಿಸಲು ಹೋಗಿ ಈ ದುರಂತಕ್ಕೆ ಸಂಭವಿಸಿದೆ ಎಂದು ಅವರು ವಿವರಿಸಿದ್ದಾರೆ.
"ಮುಂದ್ರಾದ ಗುಂಡಾಲಾ ಗ್ರಾಮದ ನರ್ಮದಾ ಕಾಲುವೆಯಲ್ಲಿ ಒಂದು ಕುಟುಂಬದ ಐದು ಮಂದಿ ನೀರು ಪಾಲಾಗಿದ್ದಾರೆ. ಪೊಲೀಸರು ಎಲ್ಲ ದೇಹಗಳನ್ನು ಹೊರ ತೆಗೆದಿದ್ದಾರೆ. ನೀರು ತರಲು ಕಾಲುವೆಗೆ ಹೋದ ಮಹಿಳೆಯೊಬ್ಬರು ಜಾರಿ ಬಿದ್ದಾಗ ಅವರನ್ನು ರಕ್ಷಿಸಲು ಹೋದ ಕುಟುಂಬದ ಐದು ಮಂದಿ ಮುಳುಗಿದರು' ಎಂದು ಕಚ್ ಪಶ್ಚಿಮ ಎಸ್ಪಿ ಸೌರಭ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.