-->

ಹಸೆಮಣೆ ಏರಿದ 35 ವರ್ಷಗಳ ಹಿಂದಿನ ಹೈಸ್ಕೂಲ್ ಸಹಪಾಠಿಗಳು: ಇವರಿಬ್ಬರು ಒಂದಾಗಿದ್ದು ಹೇಗೆ ಗೊತ್ತೇ?

ಹಸೆಮಣೆ ಏರಿದ 35 ವರ್ಷಗಳ ಹಿಂದಿನ ಹೈಸ್ಕೂಲ್ ಸಹಪಾಠಿಗಳು: ಇವರಿಬ್ಬರು ಒಂದಾಗಿದ್ದು ಹೇಗೆ ಗೊತ್ತೇ?

ತ್ರಿಶ್ಶೂರ್: ಸ್ನೇಹಿತರ ಸಹಾಯದಿಂದ ಹೈಸ್ಕೂಲ್ ಸಹಪಾಠಿಗಳಿಬ್ಬರು 35 ವರ್ಷಗಳ ಬಳಿಕ ವಿವಾಹವಾಗಿರುವ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಈ ನವಜೋಡಿಯ ಹೆಸರು ಹರಿದಾಸನ್ ಮತ್ತು ಸುಮತಿ. ಇವರಿಬ್ಬರೂ 1986-87ನೇ ಬ್ಯಾಚ್‌ನ ಹೈಸ್ಕೂಲ್ ವಿದ್ಯಾರ್ಥಿಗಳು. ಈ ವೇಳೆ ಹರಿದಾಸನ್ ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ ಕೇರಳ ವಿದ್ಯಾರ್ಥಿ ಸಂಘದ ನಾಯಕರಾಗಿದ್ದರು. ಸುಮತಿ ನ್ಯೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತೆಯಾಗಿದ್ದರು.

ಪ್ರಸ್ತುತ ಹರಿದಾಸನ್ ಕಲಾಮಂಡಂಳಂನ ತಿಮಿಲಾ ಪರಿಣಿತರು. ಸುಮತಿ ಸಿಪಿಎಂ ಪನ್ನಿತ್ತಡಂ ಶಾಖೆಯ ಸದಸ್ಯೆ, ಮಹಿಳಾ ಸಂಘದ ಕಾರ್ಯಕರ್ತೆ ಮತ್ತು ಚೋವನ್ನೂರು ಬ್ಲಾಕ್‌ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿದ್ದಾರೆ. ನ.14ರಂದು ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಥನಲ್' ಹೆಸರಿನ ಮರತಮ್ಮಕೂಡು ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ವಾಟ್ಸ್ಆ್ಯಪ್ ಗ್ರೂಪ್ ಇವರಿಬ್ಬರನ್ನು ಒಂದುಗೂಡಿಸಿದೆ. ಮೂರು ವರ್ಷಗಳ ಹಿಂದೆ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನದ ಸಂದರ್ಭ ಇವರಿಬ್ಬರೂ ಅವಿವಾಹಿತರು ಮತ್ತು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಇವರ ಸಹಪಾಠಿಗಳು ಗಮನಿಸಿದ್ದಾರೆ. ತಿಂಗಳ ಹಿಂದೆ ಅವರ ಮಾಜಿ ಕ್ಲಾಸ್ ಲೀಡರ್ ಸತೀಶನ್ ಅವರು ತಾವಿಬ್ಬರೂ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಬಹುದೇ ಎಂದು ಕೇಳಿದ್ದಾರೆ. ಈ ಸಲಹೆಯನ್ನು ಅವರ ಸಹಪಾಠಿಗಳು ಸಹ ಬೆಂಬಲಿಸಿದ್ದಾರೆ. ಆದರೆ ಇದರ ಬಗ್ಗೆ ಇಬ್ಬರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೂ ಅವರ ಸ್ನೇಹಿತರು ಒಪ್ಪಿಸುವ ಪ್ರಯತ್ನ ಬಿಡಲಿಲ್ಲ. ಅಂತಿಮವಾಗಿ ಕುನ್ನಬತುಕಾವು ದೇವಿ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಆಶೀರ್ವಾದದೊಂದಿಗೆ ನ.14ರಂದು ವಿವಾಹವಾದರು.

ಮದುವೆ ಬಗ್ಗೆ ಮಾತನಾಡಿರುವ ಸುಮತಿ, ನಾವೆಂದೂ ಇದನ್ನು ನಿರೀಕ್ಷಿಸಿರಲಿಲ್ಲ. ನಾವು ಒಟ್ಟಿಗೆ ಅಧ್ಯಯನ ಮಾಡಿದ್ದರಿಂದ ನಾವು ಪರಸ್ಪರ ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ ನಾವು ಮದುವೆಯಾಗಲು ನಿರ್ಧರಿಸಿದ್ದೇವೆ. ರಾಜಕೀಯ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆ. ಅವುಗಳನ್ನು ಒಟ್ಟಿಗೆ ಸೇರಿಸುವುದಿಲ್ಲ ಎಂದಿದ್ದಾರೆ.

ನಾನು ಮದುವೆಯ ಬಗ್ಗೆ ಎಂದಿಗೂ ಯೋಚಿಸಲಿಲ್ಲ. ಆದರೆ ನಾನು ಒಂಟಿಯಾಗಿರುವ ಬಗ್ಗೆ ದುಃಖಿತನಾಗಿದ್ದೆ. ಈಗ ಸ್ನೇಹಿತರು ಮತ್ತು ಕುಟುಂಬದವರ ನೆರವಿನಿಂದ ನನಗೆ ಓರ್ವ ಒಡನಾಡಿ ಸಿಕ್ಕಿದ್ದಾಳೆ ಎಂದು ಹರಿದಾಸನ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article