ಬಾಲಕಿ ಸಂಚಾರ ಮಾಡುತ್ತಿದ್ದ ಸ್ಕೂಟರ್ ಅಪಘಾತ: ಪೋಷಕರಿಗೆ 26 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ


ಬಂಟ್ವಾಳ: ಇಲ್ಲಿನ ಸಿದ್ದಕಟ್ಟೆಯಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಗೆ ಚಲಾಯಿಸಲು ಸ್ಕೂಟರ್‌ ನೀಡಿರುವ ಆಕೆಯ ಪೋಷಕರಿಗೆ ಬಂಟ್ವಾಳ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಕಳೆದ ಆಗಸ್ಟ್‌ನಲ್ಲಿ ಸಿದ್ದಕಟ್ಟೆಯಲ್ಲಿ ಸ್ಕೂಟರ್‌ ಹಾಗೂ ಕಾರಿನ ಮಧ್ಯೆ ಅಪಘಾತ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಎಎಸ್‌ಐ ವಿಜಯ್‌ ಅವರು ನೋಟಿಸ್‌ ಜಾರಿ ಮಾಡಿದ್ದರು. ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಾಲಕಿಯ ತಾಯಿಗೆ ದಂಡ ವಿಧಿಸಿ ಆದೇಶ ನೀಡಿದೆ.

BREAKING NEWS
Loading latest news...
Join our WhatsApp Channel Powered By : Online Pudu