ಮಂಗಳೂರು: ಹಿಂದೂ ಯುವತಿಯರನ್ನು ಲವ್ ಜಿಹಾದ್ ಖೆಡ್ಡಾಕ್ಕೆ ಬೀಳಿಸುತ್ತಿರುವ ಶಾಹಿನ್ ಗ್ಯಾಂಗ್ ವಿರುದ್ಧ ತನಿಖೆಗೆ ಆಗ್ರಹ

ಮಂಗಳೂರು: ಹಿಂದೂ ಯುವತಿಯರನ್ನು ಲವ್ ಜಿಹಾದ್ ಖೆಡ್ಡಾಕ್ಕೆ ಬೀಳಿಸುತ್ತಿರುವ ಶಾಹಿನ್ ಗ್ಯಾಂಗ್ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದುರ್ಗಾವಾಹಿನಿ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಅನ್ಶು ಕುಮಾರ್ ಅವರನ್ನು ಆಗ್ರಹಿಸಿದೆ.

ಮಂಗಳೂರು ನಗರದ ಬಿ.ಸಿ.ರೋಡ್ ನಿವಾಸಿ ಇರ್ಫಾನ್ ಎಂಬಾತ  ಚಿಕ್ಕಮಗಳೂರು ಕಳಸ ಮೂಲದ ಹಿಂದೂ ಯುವತಿಯನ್ನು ಲವ್ ಜಿಹಾದ್ ಮಾಡಲು ಯತ್ನಿಸಿದ್ದಾನೆ. ಇದಕ್ಕಾಗಿ ಆತ ತಾನು ಹಿಂದೂ ಎಂದು ನಕಲಿ ಆಧಾರ್ ದಾಖಲೆಯನ್ನು ಸೃಷ್ಟಿಸಿ ಆಕೆಗೆ ತಾನು ಹಿಂದೂ ಎಂದು ನಂಬಿಸಿದ್ದಾನೆ. ಅಲ್ಲದೆ ಅ.21ರಂದು ಆಕೆಯೊಂದಿಗೆ ಬೆಂಗಳೂರಿಗೆ ಪರಾರಿಯಾಗಲೆತ್ನಿಸುತ್ತಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಕಂಕನಾಡಿ ಠಾಣಾ ಪೊಲೀಸರಿಗೊಪ್ಪಿಸಿದ್ದಾರೆ.


ಇದೊಂದು ಆತಂಕಕಾರಿ ಘಟನೆಯಾಗಿದ್ದು, ಈತನ ವಿರುದ್ಧ ಲವ್ ಜಿಹಾದ್ ಹಾಗೂ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಜೊತೆಗೆ ಈ ಲವ್ ಜಿಹಾದ್ ಗೆ ನೆರವು ನೀಡುತ್ತಿರುವ ನಿಷೇಧಿತ ಪಿಎಫ್ಐ ಸಂಘಟನೆಯ ಶಾಹಿನ್ ಗ್ಯಾಂಗ್ ಮುಸ್ಲಿಂ ಮಹಿಳಾ ತಂಡದ ಬಗ್ಗೆ ವಿಶೇಷ ತನಿಖೆ ನಡೆಸಲು ವಿಶ್ವ ಹಿಂದೂ ಪರಿಷತ್ ದುರ್ಗಾವಾಹಿನಿ ಮಂಗಳೂರು ನಗರ ಡಿಸಿಪಿ ಅನ್ಶು ಕುಮಾರ್ ಅವರಿಗೆ ಮನವಿ ಮಾಡಿದೆ.
BREAKING NEWS
Loading latest news...
Join our WhatsApp Channel Powered By : Online Pudu