ಲಕ್ಷ್ಮಿ ನಾರಾಯಣ ಯೋಗ: ಈ ಮೂರು ರಾಶಿಯವರಿಗೆ ಶುಭದಿನ ಆರಂಭ..!




ಕನ್ಯಾ ರಾಶಿ: ಬುಧ-ಶುಕ್ರರ ಸಂಯೋಗದಿಂದ ರೂಪುಗೊಂಡ ಲಕ್ಷ್ಮೀ-ನಾರಾಯಣ ಯೋಗವು ಕನ್ಯಾ ರಾಶಿಯವರಿಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಸಾಕಷ್ಟು ಧನಲಾಭವಿರುತ್ತದೆ. ನೀವು ಸಾಲದಿಂದ ಮುಕ್ತರಾಗಬಹುದು. ದೀರ್ಘಕಾಲದಿಂದ ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. 


ಧನು ರಾಶಿ: ಈ ಲಕ್ಷ್ಮೀ ನಾರಾಯಣ ಯೋಗವು ಧನು ರಾಶಿಯವರಿಗೆ ವರವನ್ನು ನೀಡುತ್ತದೆ. ಬುಧ-ಶುಕ್ರರ ಸಂಯೋಗದಿಂದ ಉದ್ಯೋಗದಲ್ಲಿ ಅಪೇಕ್ಷಿತ ಪ್ರಗತಿಯನ್ನು ಪಡೆಯಬಹುದು. ಪ್ರತಿಷ್ಠೆ, ಗೌರವ ಹೆಚ್ಚಾಗಲಿದೆ. ಆದಾಯವೂ ಹೆಚ್ಚಲಿದೆ. ಮನೆಯಲ್ಲಿ ಸಂತೋಷ ಇರುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. 


ಮಕರ ರಾಶಿ: ಲಕ್ಷ್ಮೀ ನಾರಾಯಣ ಯೋಗವು ಮಕರ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಪ್ರಗತಿ ಇರುತ್ತದೆ ಮತ್ತು ವಿತ್ತೀಯ ಲಾಭವೂ ಇರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. 
BREAKING NEWS
Loading latest news...
Join our WhatsApp Channel Powered By : Online Pudu