50 ವರ್ಷದಿಂದ ಸ್ನಾನ ಮಾಡದ ವಿಶ್ವದ ಅತ್ಯಂತ ಕೊಳಕು ಮನುಷ್ಯ ಸಾವು

ಟೆಹರಾನ್: 50 ವರ್ಷಗಳಿಂದ ಸ್ನಾನವನ್ನೇ ಮಾಡದ ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ ಕುಖ್ಯಾತಿಗೊಳಗಾಗಿದ್ದ ಇರಾನಿನ ಅಮೊಯು ಹಾಜಿ (94) ನಿಧನರಾಗಿದ್ದಾರೆ.

50 ವರ್ಷಕ್ಕೂ ಅಧಿಕ ಕಾಲ ಸ್ನಾನವನ್ನೇ ಮಾಡದೇ ಒಂಟಿ ಜೀವನ ನಡೆಸುತ್ತಿದ್ದ ಇರಾನಿನ ದಕ್ಷಿಣ ಪ್ರಾಂತ್ಯದ ಫಾರ್ಸ್‍ನ ದೇಜ್ಗಾ ಗ್ರಾಮದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಅಮೊಯು ಹಾಜಿ ತಾನು ಸ್ನಾನ ಮಾಡಿದರೆ ಅನಾರೋಗ್ಯಕ್ಕೀಡಾಗುತ್ತೇನೆ ಎಂದು ಸ್ನಾನ ಮಾಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. 

ಆದರೆ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಅಲ್ಲಿನ ಗ್ರಾಮಸ್ಥರು ಆತನನ್ನು ಬಲವಂತವಾಗಿ ಸ್ನಾನಗೃಹಕ್ಕೆ ಕರೆದೊಯ್ದು ಸ್ನಾನ ಮಾಡಿಸಿದ್ದರು. 2013ರಲ್ಲಿ ಹಾಜಿ ಜೀವನದ ಬಗ್ಗೆ ದಿ ಸ್ಟ್ರೇಂಜ್ ಲೈಫ್ ಆಫ್ ಅಮೊಯು ಹಾಜಿ ಎಂಬ ಒಂದು ಕಿರು ಚಿತ್ರವನ್ನು ನಿರ್ಮಿಸಲಾಗಿತ್ತು.


BREAKING NEWS
Loading latest news...
Join our WhatsApp Channel Powered By : Online Pudu