-->
ಮಂಗಳೂರು: ರೈಲಿನಡಿಗೆ ತಲೆ ಕೊಟ್ಟು ಯುವಕ ಆತ್ಮ‌ಹತ್ಯೆ; ಅಪಘಾತದಲ್ಲಿ ಹೆತ್ತವ್ವೆ, ಸೋದರನ ಕಳೆದುಕೊಂಡಿದ್ದ ನವವಿವಾಹಿತ ದುರಂತದಲ್ಲಿ ಅಂತ್ಯ..!

ಮಂಗಳೂರು: ರೈಲಿನಡಿಗೆ ತಲೆ ಕೊಟ್ಟು ಯುವಕ ಆತ್ಮ‌ಹತ್ಯೆ; ಅಪಘಾತದಲ್ಲಿ ಹೆತ್ತವ್ವೆ, ಸೋದರನ ಕಳೆದುಕೊಂಡಿದ್ದ ನವವಿವಾಹಿತ ದುರಂತದಲ್ಲಿ ಅಂತ್ಯ..!

ಮಂಗಳೂರು: ನವ ವಿವಾಹಿತ ಯುವಕನೋರ್ವನು ರೈಲಿನಡಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದ ಎಕ್ಕೂರಿನ ರೈಲು ಹಳಿಯಲ್ಲಿ ನಡೆದಿದೆ. 

ನಗರದ ಜಪ್ಪಿನಮೊಗರು ತಂದೋಳಿಗೆ ನಿವಾಸಿ ಧೀರಜ್ ಕುಲಾಲ್(32) ಮೃತಪಟ್ಟ ದುರ್ದೈವಿ ಯುವಕ. 

ಖಾಸಗಿ ಕಂಪೆನಿಯೊಂದರಲ್ಲಿ ಮಾರ್ಕೆಂಟಿಗ್ ಮ್ಯಾನೇಜರ್ ಆಗಿದ್ದ ಧೀರಜ್ ಆರೇಳು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ನೂತನ ಜೀವನದ ಸಂಭ್ರಮದಲ್ಲಿರಬೇಕಾದ ಧೀರಜ್ ರವಿವಾರ ಮಧ್ಯಾಹ್ನ ಎಕ್ಕೂರು ರೈಲ್ವೇ ಹಳಿಯಲ್ಲಿ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ. ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲಾಗದೆ ಅವರು ಆತ್ಮ‌ಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಧೀರಜ್ ಅವರ ತಾಯಿ ಗಿರಿಜಾ 1995ರಲ್ಲಿ ಅಪಘಾತಕ್ಕೆ ಬಲಿಯಾಗಿದ್ದರು. ಆ ಬಳಿಕ ಅವರ ತಂದೆ ಧೀರಜ್ ಹಾಗೂ ಅವರ ಸೋದರ ಪುಷ್ಪರಾಜ್ ರನ್ನು ತೊರೆದು ಹೋಗಿದ್ದರು ಎನ್ನಲಾಗಿದೆ. ಅನಾಥರಾಗಿದ್ದ ಧೀರಜ್ ಮತ್ತು ಪುಷ್ಪರಾಜ್ ದೊಡ್ಡಮ್ಮನ ಪಾಲನೆಯಲ್ಲಿ ಬೆಳೆದಿದ್ದರು. ಆದರೆ ಪುಷ್ಪರಾಜ್ ಎರಡು ವರ್ಷಗಳ ಹಿಂದೆ ಪದವಿನಂಗಡಿಯಲ್ಲಿ ನಡೆದಿರುವ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಹೀಗೆ ಅಪಘಾತದಲ್ಲಿಯೇ ತನ್ನವರನ್ನು ಕಳಕೊಂಡಿದ್ದ ಧೀರಜ್ ಕೂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದು ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100