MANGALORE- ಮೇಯರ್ , ಉಪಮೇಯರ್ ಆಯ್ಕೆ ಬಳಿಕ ಮಾಧ್ಯಮಕ್ಕೆ ಹೇಳಿದ್ದು ಹೀಗೆ...( video)

 







ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ( Mangalore city corporation ) ಇಂದು ನಡೆದ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯಿಂದ‌ ಸ್ಪರ್ಧಿಸಿದ್ದ ಜಯನಂದ ಅಂಚನ್‌ (Jayananda Anchan) ಮತ್ತು ಪೂರ್ಣಿಮಾ (Poornima) ಬಹುಮತಗಳಿಂದ ಆಯ್ಕೆಯಾದರು.

ಕದ್ರಿ ಪದವು ವಾರ್ಡ್ ನ ಜಯನಂದ ಶೆಟ್ಟಿ ಮೇಯರ್ ( mayor) ಆಗಿ, ಸೆಂಟ್ರಲ್ ಮಾರ್ಕೆಟ್ ವಾರ್ಡ್ ನ ಪೂರ್ಣಿಮಾ ಅವರು ಉಪಮೇಯರ್ ( Deputy mayor) ಆಗಿ ಆಯ್ಕೆಯಾದರು. 

ಇಂದು ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಜಯನಂದ ಅಂಚನ್ ಕಾಂಗ್ರೆಸ್ ‌ನಿಂದ ಶಶಿಧರ್ ಹೆಗ್ಡೆ, ಉಪಮೇಯರ್ ಸ್ಥಾನಕ್ಕೆ   ಬಿಜೆಪಿಯಿಂದ ಪೂರ್ಣಿಮಾ , ಕಾಂಗ್ರೆಸ್ ನಿಂದ ಝೀನತ್ ಸಂಶುದ್ದೀನ್ ಸ್ಪರ್ಧಿಸಿದ್ದರು. 

ಚುನಾವಣೆಯಲ್ಲಿ ಮೇಯರ್ ಮತ್ತು ಉಪಮೇಯರ್  ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ 46 ಮತಗಳು , ಕಾಂಗ್ರೆಸ್ ಅಭ್ಯರ್ಥಿಗಳಿಗೆ 14 ಮತಗಳು ಲಭಿಸಿದವು. ಎಸ್ ಡಿಪಿಐ ನ ಇಬ್ಬರು ಸದಸ್ಯರು ಚುನಾವಣೆಯಲ್ಲಿ ತಟಸ್ಥರಾಗಿದ್ದರು.  ಬಿಜೆಪಿ ಇಬ್ಬರು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ 60 ಸ್ಥಾನಗಳಿದ್ದು, ಬಿಜೆಪಿಯ 44 ಸದಸ್ಯರು, ಕಾಂಗ್ರೆಸ್ ನ 14 ಸದಸ್ಯರು , ಎಸ್ ಡಿ ಪಿ ಐ ನ ಇಬ್ಬರು ಸದಸ್ಯರಿದ್ದಾರೆ.  ಪಾಲಿಕೆ ವ್ಯಾಪ್ತಿಗೆ ಸೇರಿದ ಇಬ್ಬರು ಶಾಸಕರು ಸೇರಿದಂತೆ 62 ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡರು.  ಚುನಾವಣಾಧಿಕಾರಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ ಜೆ ಸಿ ಪ್ರಕಾಶ್ ಚುನಾವಣೆ ನಡೆಸಿಕೊಟ್ಟರು.
BREAKING NEWS
Loading latest news...
Join our WhatsApp Channel Powered By : Online Pudu