Job in IOCL- ಇಂಡಿಯನ್ ಆಯಿಲ್ ಲಿ.ನಲ್ಲಿ ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್ ಲಿ.ನಲ್ಲಿ ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ





ಇಂಡಿಯನ್ ಆಯಿಲ್ ಕಾರ್ಪೊರೇಶನ್‌ ಲಿ(IOCL)‌ನಲ್ಲಿ ಖಾಲಿ ಇರುವ ನಾನ್‌ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.



ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆಯಲ್ಲಿ ನೇಮಕಾತಿ ಆದ ಅಭ್ಯರ್ಥಿಗಳು ದೇಶದ ಯಾವುದೇ ಪ್ರದೇಶದಲ್ಲೂ ಕೆಲಸ ಮಾಡಲು ಸಿದ್ಧರಿರಬೇಕು. ಈ ಹುದ್ದೆಗಳು ಕಂಪನಿಯ ಪೈಪ್‌ಲೈನ್‌ ವಿಭಾಗಕ್ಕೆ ಸೇರಿವೆ.



ಹುದ್ದೆಗಳ ಸಂಖ್ಯೆ: 56



ವಿದ್ಯಾರ್ಹತೆ: ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ, ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಡಿಸೆಂಬರ್‌ 2022ಕ್ಕೆ ಅನ್ವಯವಾಗುವಂತೆ ಕನಿಷ್ಠ 18, ಗರಿಷ್ಠ 26 ವರ್ಷ ವಯಸ್ಸಾಗಿರಬೇಕು.



ನೇಮಕಾತಿ: ಕೌಶಲ್ಯ ಅಥವಾ ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ.



ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳನ್ನು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ತರಬೇತಿ ಭತ್ಯೆ, ನೇಮಕಾತಿ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ ಲಿಮಿಟೆಡ್‌ನ https://www.iocl.com ವೆಬ್‌ಸೈಟ್‌ ನೋಡಬಹುದು.


ಅರ್ಜಿ ಸಲ್ಲಿಸಲು ಕೊನೆಯ ದಿನ: 10 ಅಕ್ಟೋಬರ್‌ 2022


ವೆಬ್‌ಸೈಟ್‌: www.iocl.com ಮತ್ತು https://plapps.indianoil.in/o 

BREAKING NEWS
Loading latest news...
Join our WhatsApp Channel Powered By : Online Pudu