3 ಲಕ್ಷ ಮದ್ಯದ ಬಾಟಲಿಗಳು ರೋಡ್ ರೋಲರ್ ನಡಿ ಸಮಾಧಿ: ರಸ್ತೆಯ ಮೇಲೆಲ್ಲಾ ಮದ್ಯ

ಅಮರಾವತಿ:‌ ಇಲ್ಲಿನ‌ ಎನ್‌ಟಿಆರ್ ಜಿಲ್ಲೆಯ ನಂದಿಗಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 5.47 ಕೋಟಿ ರೂ. ಮೌಲ್ಯದ ಮದ್ಯದ ಬಾಟಲ್‌ಗಳನ್ನು ರೋಡ್ ರೋಲರ್ ಸಹಾಯದಿಂದ ಮದ್ಯವನ್ನು ಆಂಧ್ರಪ್ರದೇಶದ ಪೊಲೀಸರು ನಾಶಪಡಿಸಿದ್ದಾರೆ.

ಈ ವೇಳೆವಸುಮಾರು 3 ಲಕ್ಷ ಮದ್ಯದ ಬಾಟಲಿಗಳು ರೋಡ್‌ರೋಲರ್ ನಿಂದಾಗಿ ಪುಡಿಪುಡಿಯಾಗಿದೆ. ಈ ಬಾಟಲಿಗಳಲ್ಲಿರುವ ಮದ್ಯವು ರಸ್ತೆಯ ಮೇಲೆಲ್ಲಾ ಹರಿದಾಡಿದೆ. ಈ ಕಾರ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗಿದೆ.

ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಈ ಮದ್ಯದ ಬಾಟಲ್‌ಗಳನ್ನು ಸಾಗಿಸಲಾಗುತ್ತಿತ್ತು. ನಗರದ ಹೊರವಲಯದಲ್ಲಿರುವ ಎಲ್ಲಾ ಚೆಕ್ ಪೋಸ್ಟ್ ಗಳ ಮೇಲೆ ಏಕಾಏಕಿ ದಾಳಿ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇತರ ರಾಜ್ಯಗಳಿಂದ ಆಂಧ್ರಪ್ರದೇಶಕ್ಕೆ ಅಕ್ರಮ ಮದ್ಯ ಸಾಗಣೆಯಾಗಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಷಯ ಪೊಲೀಸರಿಗೆ ತಿಳಿಯುತ್ತಲೇ ದಾಳಿ ಮಾಡಿದ ತಂಡ 2 ಸಾವಿರ ಲೀಟರ್ ಅಕ್ರಮ ಮದ್ಯವನ್ನು ನಾಶಪಡಿಸಿದ್ದಾರೆ. ಅಕ್ರಮ ಮದ್ಯ ಸಾಗಾಟಕ್ಕೆ ಸಂಬಂಧಿಸಿದಂತೆ 226 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ವಿಜಯವಾಡದ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ವಿವರಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu