ಮೀನ ರಾಶಿಯಲ್ಲಿ ಗಜಕೇಸರಿ ಯೋಗ..!! ಅಗಸ್ಟ್ 15ರಿಂದ ಈ ರಾಶಿಯವರ ಜೀವನ ಸಂಪೂರ್ಣ ಬದಲು!!
Sunday, August 14, 2022
ಆಗಸ್ಟ್ 15ರಂದು ಮೀನ ರಾಶಿಯಲ್ಲಿ ಚಂದ್ರನ ಗೋಚರದಿಂದ ಈ ರಾಶಿಯಲ್ಲಿ ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಅವಧಿಯಲ್ಲಿ ಮೀನ ರಾಶಿಯ ಜನರಿಗೆ ವಿಶೇಷ ಫಲಗಳು ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ದೇವಗುರು ಬೃಹಸ್ಪತಿ ಹಾಗೂ ಚಂದ್ರನ ಸಂಯೋಜನೆ ಗಜಕೇಸರಿ ಯೋಗವನ್ನು ನಿರ್ಮಿಸುತ್ತದೆ ಮತ್ತು ಇದನ್ನು ಜೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶುಭ ಎಂದು ಭಾವಿಸಲಾಗುತ್ತದೆ.
ಗಜಕೆಸರಿ ಯೋಗದ ಮಹತ್ವ
ಗಜ ಇದರ ಅರ್ಥ ಆನೆ ಮತ್ತು ಕೇಸರಿಯ ಅರ್ಥ ಸ್ವರ್ಣ ಎಂದಾಗುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಆನೆ ಎಂದರೆ ಶಕ್ತಿಯ ಸಂಕೇತ ಹಾಗೂ ಸ್ವರ್ಣ ಸಮೃದ್ಧಿಯ ಸಂಕೇತ ಎಂದಾಗುತ್ತದೆ. ಕುಂಡಲಿಯಲ್ಲಿ ಈ ಯೋಗ ನಿರ್ಮಾಣಗೊಂಡಾಗ ಶಕ್ತಿ ಮತ್ತು ಸಮೃದ್ಧಿಯಲ್ಲಿ ಹೆಚ್ಚಳವಾಗುತ್ತದೆ.
ಗಣಪತಿಯ ಆಶೀರ್ವಾದ ಲಭಿಸುತ್ತದೆ
ಆಗಸ್ಟ್ 15ರಂದು ಚಂದ್ರ ಹಾಗೂ ದೇವಗುರು ಒಟ್ಟಿಗೆ ಬರುವುದರಿಂದ ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತದೆ. ಇದಲ್ಲದೆ ಆಗಸ್ಟ್ 15ರಂದು ಸಂಕಷ್ಟ ಚತುರ್ಥಿ ಕೂಡ ಇದೆ. ಇದರಿಂದ ಶ್ರೀ ಗಜಾನನನ ಆಶೀರ್ವಾದ ಕೂಡ ಲಭಿಸುತ್ತದೆ.