ಬೆಂಗಳೂರು: ಮಾಡಿರುವ ಕಬಾಬ್ ಸರಿಯಾಗಿಲ್ಲವೆಂದು ಪತ್ನಿಗೆ ಇರಿದು ಪತಿ ನೇಣಿಗೆ ಶರಣು

ಬೆಂಗಳೂರು: ಪತ್ನಿ ಮಾಡಿರುವ ಕಬಾಬ್ ಚೆನ್ನಾಗಿವೆಂದು ಆಕೆಗೆ ಚಾಕುವಿನಿಂದ ಇರಿದು ಹಲ್ಲೆಗೈದಿದ್ದ ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನಡೆದಿದೆ.

ಬನ್ನೇರುಘಟ್ಟ ನಿವಾಸಿ ಎಂ. ಸುರೇಶ್ ಹಾಗೂ ಆತನ ಪತ್ನಿ ಶಾಲಿನಿ ಇಬ್ಬರೂ ಗಾರ್ಮೆಂಟ್ ನೌಕರರಾಗಿದ್ದರು. ಮಂಗಳವಾರ ಸಂಜೆ ಸುರೇಶ್ ಬಂದಿದ್ದ ಪತ್ನಿ ಶಾಲಿನಿ ಬಳಿ ಕಬಾಬ್ ಮಾಡುವಂತೆ ಹೇಳಿದ್ದ. ಆಕೆ ಅದರಂತೆ ಕಬಾಬ್ ಮಾಡಿದ್ದರು. ಆದರೆ ಅದು ಅಷ್ಟೊಂದು ರುಚಿಕರವಾಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಸುರೇಶ್, ಆಕೆಯ ತಲೆ, ಕೈಗೆಲ್ಲ ಚಾಕುವಿನಿಂದ ಇರಿದು, ಹಲ್ಲೆ ಮಾಡಿದ್ದ. 

ಸಹಾಯ ಕೋರಿ ಆಕೆ ಕಿರುಚಿದ್ದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣ ಮನೆಗೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯವರ ಮಾಹಿತಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶಾಲಿನಿ ಹೇಳಿಕೆಯನ್ನೂ ಪಡೆದಿದ್ದರು. ಇತ್ತ ಶಾಲಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ವೇಳೆ ಪೊಲೀಸರು ಸುರೇಶ್‌ನನ್ನು ಹುಡುಕಿಕೊಂಡು ಆತನ ಮನೆಕಡೆಗೆ ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ನೇಣಿಗೆ ಶರಣಾಗಿದ್ದಾನೆ. 

ಈ ಬಗ್ಗೆ ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu