ಮಂಗಳೂರಿನಲ್ಲಿ ಇಬ್ಬರ ಮೇಲೆ ಗೂಂಡಾ ಆ್ಯಕ್ಟ್ ಜಾರಿ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದ ಇಬ್ಬರು ದುಷ್ಕರ್ಮಿಗಳ ಮೇಲೆ ರೌಡಿಶೀಟರ್ ಶೀಟರ್ ತೆರೆಯಲಾಗಿದೆ.

ನಗರದ ಎಕ್ಕೂರು ನಿವಾಸಿ ಧೀರಜ್ ಕುಮಾರ್(27), ಬಜಾಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ರೌಡಿಶೀಟರ್ ಫೈಲ್ ಓಪನ್ ಆಗಿರುವ ಆರೋಪಿಗಳು. ಈ ದುಷ್ಕರ್ಮಿಗಳಿಬ್ಬರೂ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಈ ಇಬ್ಬರೂ ಕೊಲೆಯತ್ನ, ಸುಲಿಗೆ, ದರೋಡೆಗೆ ಯತ್ನ, ಹಲ್ಲೆ ಅಪರಾಧಕ್ಕೆ ಒಳಸಂಚು ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗಿ ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆಯಾಗುವಂತಹ ಕೃತ್ಯದಲ್ಲಿ ತೊಡುಗುತ್ತಿದ್ದರು. ಪರಿಣಾಮ ಸಾಮಾನ್ಯ ಕಾನೂನುಗಳಿಂದ ಇವರ ಅಪರಾಧ ಕೃತ್ಯಗಳಿಗೆ ನಿಯಂತ್ರಣ ಹೇರುವುದು ಕಷ್ಟಕರವಾಗಿದೆ.

ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಇಬ್ಬರೂ ಆರೋಪಿಗಳನ್ನು  ಗರಿಷ್ಠ ಅವಧಿಗೆ ಬಂಧನದಲ್ಲಿಡುವಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಆದೇಶಿಸಿದ್ದಾರೆ. ಸದ್ಯ ಇವರಿಬ್ಬರೂ ಮಂಗಳೂರು ಕಾರಾಗೃಹದಲ್ಲಿ ಬಂಧಿಗಳಾಗಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu